ಹಾವೇರಿ: ಆರಕ್ಷಕರಿಗೆ ಅವರದ್ದೇ ಆದ ಗೌರವವಿದೆ. ಇಲ್ಲೊಬ್ಬ ಪೋಲಿ ಪೊಲೀಸಪ್ಪನಿಂದ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಈತನಿಗೆ ಅಮಾನತ್ತು ಶಿಕ್ಷೆಯನ್ನು ನೀಡಲಾಗಿದೆ.
ಘಟನೆ ವಿವರ : ಹಾವೇರಿ ಮಹಿಳಾ ಠಾಣೆಯ ಸಿಪಿಐ ಚಿದಾನಂದ ನೊಂದು ದೂರು ನೀಡಲು ಬಂದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಬಗ್ಗೆ ದೂರು ದಾಖಲಾಗಿದೆ. ಮಾತ್ರ ಈ ಪೋಲಿ ಪೊಲೀಸಪ್ಪ ದೂರು ನೀಡಲು ಬಂದ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡಿ ಸನ್ನೆ ಮೂಲಕ ಮಂಚಕ್ಕೆ ಕರೆಯುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಕಂಪ್ಲೇಟ್ ಕೊಡಲು ಬಂದವರ ವೀಕ್ ನೆಸ್ ನ್ನು ಬಂಡವಾಳ ಮಾಡಿಕೊಂಡು ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಹಲವರು ದೂರಿದ್ದಾರೆ.ವಿಡಿಯೋ ಕಾಲ್ ಮಾಡಿದ ದೃಶ್ಯಗಳನ್ನು ವೈರಲ್ ಆದ ಬೆನ್ನಲ್ಲೇ ದಾವಣಗೆರೆ ಐಜಿಪಿ ಆದೇಶದ ಮೇರೆಗೆ ಚಿದಾನಂದ ನನ್ನು ಅಮಾನತ್ತು ಮಾಡಲಾಗಿದೆ.
PublicNext
19/12/2021 08:05 pm