ಮಂಡ್ಯ: ದುಷ್ಕರ್ಮಿಗಳು ಪುಂಡಾಟದಿಂದ ನೂರಾರು ಹಂದಿಗಳನ್ನು ಸಜೀವ ದಹನ ಮಾಡಿರುವಂತಹ ಮನಕಲುಕುವ ಘಟನೆ ಪಾಂಡವಪುರದ ಮಹಾತ್ಮಗಾಂಧಿ ನಗರ ಬಡಾವಣೆಯಲ್ಲಿ ನಡೆದಿದೆ.
ಹೊರ ವಲಯದಲ್ಲಿ ಗೂಡು ನಿರ್ಮಿಸಿಕೊಂಡು ಹಂದಿ ಸಾಕಾಣಿಕೆ ಮಾಡುತ್ತಿದ್ದರು ಶಿವರಾಜು ಆದರೆ ಯಾರು ಇಲ್ಲದ್ದನ್ನು ಗಮನಿಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.ಇದರಿಂದ 150 ಹಂದಿಗಳು ಸಜೀವ ದಹನವಾಗಿದ್ದು, ಸುಮಾರು 15 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ ಶಿವರಾಜು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
17/12/2021 05:52 pm