ತುಮಕೂರು: ಹೇಮಾವತಿ ನಾಲಾ ವಿಭಾಗದ ರಮೇಶ್ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೂ ಕೂಡ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಗಳ ಸಾಂಸರಿಕ ಜೀವನದ ಸಮಸ್ಯೆಗೆ ಬಲಿಯಾಯ್ತಾ ಕುಟುಂಬ? ಎನ್ನುವ ಪ್ರಶ್ನೆ ಉದ್ಭವಿಸಿದೆ.ಒಟ್ಟಿನಲ್ಲಿ ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.
ಹೇಮಾವತಿ ನಾಲಾ ವಿಭಾಗದ ಎಇಇ ಆಗಿ ಕೆಲಸ ಮಾಡ್ತಿದ್ದ ರಮೇಶ್. ನಿನ್ನೆ ಪತ್ನಿ ಮಗಳು ಸಮೇತ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಬಳಿಯಿರುವ ಕಚೇರಿಗೆ ಕೆಲಸಕ್ಕೆ ಹಾಜರಾಗಿದ್ದರು.ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಮಗಳು ಶುಭಶ್ರಿಯನ್ನು ಬೆಂಗಳೂರು ಮೂಲದ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಪತಿಯಿಂದ ದೂರ ಉಳಿದಿದ್ದಳು ಮಗಳು ಶುಭಶ್ರೀ.ಮಗಳ ಸಂಸಾರದಲ್ಲಿ ಏನಾದರೂ ನಡೆದಿತ್ತಾ? ಆ ಘಟನೆಯೇ ಅತ್ಮಹತ್ಯೆಗೆ ಕಾರಣವಾ ಎಂಬ ಸಂಶಯದಲ್ಲಿ ತನಿಖೆ ನಡೆಸಲಾಗುತ್ತಿದೆ.
ಇನ್ನೂ ಇಡಕನಹಳ್ಳಿ ಬಳಿಯ ಹೇಮಾವತಿ ನಾಲೆಯಲ್ಲಿ ರಮೇಶ್ ನ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ನಿನ್ನೆಯಿಂದ ಹುಡುಕಾಟ ನಡೆಸುತ್ತಿದ್ದರು. ಸದ್ಯ ಇಡಕನಹಳ್ಳಿಯಲ್ಲಿ ರಮೇಶ್ ಮೃತ ದೇಹ ಸಿಕ್ಕಿದೆ,
ನಿನ್ನೆ ರಾತ್ರಿ ಪತ್ನಿ ಹಾಗೂ ಶುಭಾ ಮೃತ ದೇಹ ಪತ್ತೆಯಾಗಿತ್ತು.
ಗುಬ್ಬಿ ಸಿಪಿಐ ನಧಾಪ್ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ್ದು,ಆತ್ಮಹತ್ಯೆ ಗೆ ನಿಖರ ಕಾರಣವನ್ನು ಪೊಲೀಸರು ಹುಡುಕುತ್ತಿದ್ದಾರೆ.
PublicNext
17/12/2021 03:50 pm