ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ನಂದಿನಿ ತುಪ್ಪ ಘಟಕ ಪತ್ತೆ, ಡಾಲ್ಡ ಬೆರೆಸಿ ಮಾರಾಟ ಮಾಡುತ್ತಿದ್ದ ಜಾಲ

ಮೈಸೂರು: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಕಾ ಬೃಹತ್ ಘಟಕ ಸಾಂಸ್ಕೃತಿಕ ನಗರಿಯ ಹೊರವಲಯದಲ್ಲಿ ಪತ್ತೆಯಾಗಿದೆ.

ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ಟನ್ ಗಟ್ಟಲೆ ತುಪ್ಪ ಗೋಡೌನ್ ನಲ್ಲಿ ದಾಸ್ತಾನು ಮಾಡಿ ನಂತರ ನಂದಿನಿ ತುಪ್ಪಕ್ಕೆ ಡಾಲ್ಡಾ ತುಪ್ಪ ಬೆರೆಸಿ ಮಾರಾಟ ಮಾಡುತ್ತಿದ್ದರು ಈ ಖದೀಮರು. ಈ ವೇಳೆ ನಂದಿನಿ ಲೇಬಲ್ ಗಳ ಮುದ್ರಣ ಘಟಕವೂ ಪತ್ತೆಯಾಗಿದೆ.

ನಂದಿನಿ ತುಪ್ಪ ಖರೀದಿ ಮಾಡುತ್ತಿದ್ದ ಚಂದ್ರು ಜಾಲದ ರೂವಾರಿಯಾಗಿದ್ದಾನೆ. ಜೀವನ್ ತುಪ್ಪ‌ ಕಂಪನಿಯವರಿಂದ ಈ ನಕಲಿ ಜಾಲ ಬಹಿರಂಗಗೊಂಡಿದೆ‌.

ಸ್ಥಳಕ್ಕೆ ಮೈಮುಲ್ ಎಂಡಿ ವಿಜಯ್ ಕುಮಾರ್, ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Edited By : Shivu K
PublicNext

PublicNext

16/12/2021 03:24 pm

Cinque Terre

66.28 K

Cinque Terre

10

ಸಂಬಂಧಿತ ಸುದ್ದಿ