ಜೈಪುರ್: ತಮಿಳುನಾಡಿನಲ್ಲಿ ನಿನ್ನೆ (ಡಿ.8 ರಂದು) ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ ದೇಶವೇ ಶೋಕತಪ್ತವಾಗಿದೆ. ಇಂತಹ ಸಾಮಾಜಿಕ ಜಾಲತಾಣದಲ್ಲಿ ಅವರ ಸಾವವನ್ನು ಸಂಭ್ರಮಿಸಿ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.
ರಾಜಸ್ಥಾನ ಮೂಲದ ಜವ್ವಾದ್ ಖಾನ್ ಜೈಲು ಸೇರಿದ ಯುವಕ. ಈ ಕಿಡಿಗೇಡಿ ಬಿಪಿನ್ ರಾವತ್ ಫೋಟೋ ಪೋಸ್ಟ್ ಮಾಡಿ, ನರಕಕ್ಕೆ ಹೋಗುವ ಮೊದಲೇ ಈತನ ದೇಹ ಸುಟ್ಟು ಹೋಯ್ತು ಎಂದು ಕೆಟ್ಟದಾಗಿ ಬರೆದುಕೊಂಡಿದ್ದ. ಈ ಸಂಬಂಧ ಈಗ ರಾಜಸ್ಥಾನದ ಟೋಂಕ್ ಪೊಲೀಸರು ಕಿಡಿಗೇಡಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಜವ್ವದ್ ಖಾನ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಇಸ್ಲಾಮಿಕ್ ಫಂಡಮೆಂಟಲಿಸ್ಟ್ ಎಂದು ಗುರುತಿಸಿಕೊಂಡಿದ್ದಾನೆ. ಅಲ್ಲದೇ ಉಗ್ರ ತಾಲಿಬಾನ್ ಸಂಘದ ಪರ ಹಲವು ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ. ಈಗ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
09/12/2021 07:50 pm