ಬೆಂಗಳೂರು: ಈ ವಿಡಿಯೋ ನೋಡಿದ್ರೆ ಇಂತಹ ವಿಕೃತ ಮನಸ್ಥಿತಿಯವರೂ ಇರ್ತಾರಾ ಎಂಬ ಪ್ರಶ್ನೆ ಯಾರಿಗೂ ಮೂಡದೇ ಇರದು, ಹೌದು ನಂದೀಶ್ ಎಂಬಾತನನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟು ಆತನ ಬಾಯಿಗೆ ಒಳ ಉಡುಪು ತುರುಕಿ ಚಿತ್ರ ಹಿಂಸೆ ನೀಡಿದ್ದಾರೆ ಕಿರಾತಕರು.
ಮುಖಾ ಮೂತಿ ನೋಡದೆ ಪುಂಡರು ಹಲ್ಲೆ ನಡೆಸಿದ್ದಾರೆ. ನಾಲ್ವರು ವಿಕೃತ ಮನಸ್ಸಿಗರು ನಡೆಸಿದ ಈ ಕ್ರೂರ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಡಿಯೋದ ಮೂಲವನ್ನು ಪೊಲೀಸರು ಹುಡುಕುತ್ತಿದ್ದಾರೆ. ಇನ್ನು ಘಟನೆಯ ಸ್ಥಳ ಪತ್ತೆ ಹಚ್ಚಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಖುದ್ದು ಪೊಲೀಸರೇ ಕೇಸು ದಾಖಲಿಸಿಕೊಂಡಿದ್ದಾರೆ.
PublicNext
09/12/2021 11:02 am