ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆ ವಿದ್ಯಾರ್ಥಿನಿಯರ ಮೇಲೆ 9 ಶಿಕ್ಷಕರಿಂದ ಗ್ಯಾಂಗ್ ರೇಪ್-3 ಪ್ರತ್ಯೇಕ ಪ್ರಕರಣ ದಾಖಲು

ಜೈಪುರ್:ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರೇ ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ವ್ಯಸಗಿದ ಘಟನೆ ಈಗ ಬೆಳಕಿಗೆ ಬಂದಿದೆ. ಇದಕ್ಕೆ ಶಿಕ್ಷಕಿಯರೂ ಸಾಥ್ ಕೊಟ್ಟಿರೋದು ದುರಂತ.

ಅಲ್ವಾರ್ ಜಿಲ್ಲೆಯ ಮಂಡಾನಾದಲ್ಲಿಯೇ ಈ ಶಾಲೆ ಬರೋದು. ಇಲ್ಲಿಯ 9 ಜನ ಶಿಕ್ಷಕರು ಹಾಗೂ ಪ್ರಾಂಶುಪಾಲರು ಹತ್ತನೆ ತರಗತಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ.ಮಹಿಳಾ ಶಿಕ್ಷಕಿಯರು ಈ ಕೃತ್ಯವನ್ನ ವೀಡಿಯೋ ಮಾಡಿದ ಆರೋಪವನ್ನ ಕೂಡ ಎದುರಿಸುತ್ತಿದ್ದಾರೆ.

10 ನೇ ತರಗತಿಯ ವಿದ್ಯಾರ್ಥಿನಿಯ ತಂದೆ ಶಾಲೆಗೆ ಯಾಕೆ ಹೋಗಿಲ್ಲ ಮಗಳೇ ಅಂತ ಕೇಳಿದಾಗಲೇ, ಶಿಕ್ಷಕರ ವರ್ತನೆಯನ್ನ ಅಪ್ಪನಿಗೆ ಮಗಳು ವಿವರಿಸಿದ್ದಾಳೆ. ಆಗಲೇ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಈ ಹುಡುಗಿ ಅಷ್ಟೇ ಅಲ್ಲ,6,3,4 ನೇ ತರಗತಿಯ ವಿದ್ಯಾರ್ಥಿನಿಯರ ಮೇಲೆ ಕೂಡ ರೇಪ್ ಆಗಿದೆ.

ಈ ಪ್ರಕರಣದ ಬಗ್ಗೆ ತಿಳಿದಿದ್ದೇ ತಡ, ಪೊಲೀಸರು ವಿಚಾರಣೆ ನಡೆಸಿ ಪ್ರಾಂಶುಪಾಲ ಸೇರಿ 9 ಜನರ ವಿರುದ್ಧ ಪ್ರತ್ಯೇಕ ಮೂರು ಪ್ರಕರಣ ದಾಖಲಿಸಿದ್ದಾರೆ.ತನಿಖೆ ನಡೆಸುತ್ತಿರೋ ಮಂಡಾನಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಮುಖೇಶ್ ಯಾದವ್ ಹೇಳಿದ್ದಾರೆ.

Edited By :
PublicNext

PublicNext

08/12/2021 01:29 pm

Cinque Terre

27.01 K

Cinque Terre

1

ಸಂಬಂಧಿತ ಸುದ್ದಿ