ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪ್ರಿಯಕರನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ

ಮೈಸೂರು: ಏಳು ದಿನಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ವೆಲ್ ಕಟ್ಟಿಕೊಂಡು ಕೆ.ಆರ್.ಸಾಗರ ನಾತ್೯ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ಮುಳಗಿ ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ ನಡೆದಿದೆ.

ನಗರದ ಮೇಟಗಳ್ಳಿ ಬಡವಾಣೆಯ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ನವೀನ್ ನಿಸರ್ಗಳ ಮಾವನೇ ಆಗಬೇಕು. ನಿಸರ್ಗಳ ಪೋಷಕರು ಬೇರೊಬ್ಬರ ಜೊತೆ ಕಳೆದ ಏಳು ದಿನದ ಹಿಂದೆ ಮದುವೆ ಮಾಡಿದ್ದರು. ಇದರಿಂದ ಮನನೊಂದು ನಿನ್ನೆ ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಇಬ್ಬರು ಸಂಬಂಧಿಕರಾಗಿದ್ದು, ನಿಸರ್ಗ ಮತ್ತು ನವೀನ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿ ವಿಚಾರ ಮನೆಯವರಿಗೆ ಹೇಳಿರಲಿಲ್ಲ. ನವೆಂಬರ್ 20 ರಂದು ಚಾಮರಾಜನಗರ ಸಮೀಪದ ಗ್ರಾಮಕ್ಕೆ ನಿಸರ್ಗ ಮದುವೆ ಯಾಗಿತ್ತು. ಇಬ್ಬರು ಕೂಡ ಡಿಸೆಂಬರ್ 1ರ ಮಧ್ಯಾಹ್ನ ದಿಂದ ಮನೆಯಿಂದ ನಾಪತ್ತೆಯಾಗಿದ್ದರು.ಕೆ.ಆರ್.ಎಸ್ ನ ನಾತ್೯ಬ್ಯಾಂಕ್ ನ ಮಿಲ್ಟ್ರಿ ಕ್ಯಾಂಪ್ ಬಳಿ ಸ್ಕೂಟರ್ ನಿಲ್ಲಿಸಿ ಇಬ್ಬರು ವೆಲ್ ನಿಂದ ಕಟ್ಟಿಕೊಂಡು ಹಿನ್ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Edited By : Nagaraj Tulugeri
PublicNext

PublicNext

03/12/2021 03:32 pm

Cinque Terre

37.97 K

Cinque Terre

0

ಸಂಬಂಧಿತ ಸುದ್ದಿ