ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇನೆ ಕೆಲಸಕ್ಕೆ ನಕಲಿ ದಾಖಲೆ ಸೃಷ್ಟಿ-9 ಆರೋಪಿಗಳು ಅರೆಸ್ಟ್

ವಿಜಯನಗರ:ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಅಂತ ಅನೇಕ ಯುವಕರು ಇಷ್ಟಪಡುತ್ತಾರೆ. ಆದರೆ ದಾಖಲೆಗಳು ಸೂಕ್ತ ಇಲ್ಲದೇ ಇದ್ದರೆ ಅಂತವರು ನಕಲಿಗಳ ಮೊರೆ ಹೋಗುತ್ತಾರೆ. ಅಂತಹದ್ದೇ ಒಂದು ಕೇಸ್ ಇಲ್ಲಿದೆ. ದಾಖಲೆಗಳನ್ನ ತಿದ್ದುಪಡಿ ಮಾಡಿ ಸೇನೆಗೆ ನಕಲಿ ದಾಖಲೆ ಕೊಟ್ಟ ಆರೋಪದ ಮೇಲೆ ಇಬ್ಬರು ಪೊಲೀಸರು ಸೇರಿದಂತೆ 9 ಜನರನ್ನ ಈಗ ಪೊಲೀಸರು ಬಂಧಿಸಿದ್ದಾರೆ.

ವೈಭವ್,ನೇತಾಜಿ ರಾಮ್ ಸಾವಂತ್,ಜಂಬಣ್ಣ,ಅಜಿತ್ ಕೊಂಡೆ,ವೆಂಕಟೇಶ್,ಪರಶುರಾಮ್,ಮನೋಜ್ ಅನ್ನೋರನ್ನ ಈಗ ಬಂಧಿಸಲಾಗಿದೆ.ಬಳ್ಳಾರಿ ಮೂಲದ ಪೊಲೀಸ್ ಸಿಬ್ಬಂದಿ ಅಂಕಲೇಶ್ ಹಾಗೂ ರಾಮಾಂಜನಿ ಅವರನ್ನ ಅರೆಸ್ಟ್ ಮಾಡಲಾಗಿದೆ.

ನಕಲಿ ಆಧಾರ್ ಕಾರ್ಡ್,ಜಾತಿ ಪ್ರಮಾಣ ಪತ್ರ,ಆದಾಯ ಪ್ರಮಾಣ ಪತ್ರಗಳನ್ನ ನಕಲಿ ಮಾಡಲಾಗಿದ್ದು ಸೇನೆಯಿಂದ ದಾಖಲೆಗಳ ಪರಿಶೀಲನೆಗೆ ಬಂದ್ಮೇಲೆನೆ ಈ ಪ್ರಕರಣ ಬೆಳಕಿಗೆ ಬಂದಿದೆ.

Edited By :
PublicNext

PublicNext

03/12/2021 02:21 pm

Cinque Terre

33.18 K

Cinque Terre

0