ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ಗೂಂಡಾಗಿರಿ- 'ನಿಮಗೆ ನಾಚಿಕೆ ಆಗಲ್ವಾ?': ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನೆ

ಜೈಪುರ: ಅಧಿಕಾರಿಗಳು ತರಕಾರಿ ವ್ಯಾಪಾರಿ, ಆತನ ಅಪ್ರಾಪ್ತ ಮಗ ಹಾಗೂ ಇಡೀ ಕುಟುಂಬವನ್ನು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ರಾಜಸ್ಥಾನದ ಭರತ್ ಪುರ ನಗರದಲ್ಲಿ ನಡೆದಿದೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಸ್ಥಾನದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿವೆ.

ಸದ್ಯ ಭರತ್ ಪುರ ಮುನ್ಸಿಪಲ್ ಕಾರ್ಪೊರೇಷನ್ ನ ಅಧಿಕಾರಿಗಳ ಗೂಂಡಾಗಿರಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಧಿಕಾರಿಗಳು ಅಪ್ರಾಪ್ತ ವಯಸ್ಕನನ್ನೂ ಒದೆಯುವ ಮತ್ತು ಗುದ್ದುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಷ್ಟಕ್ಕೂ ಆಗಿದ್ದೇನು?:

ಭರತ್ ಪುರದ ಜವಾಹರ್ ನಗರದಲ್ಲಿರುವ ಭಗತ್ ಸಿಂಗ್ ಚೌಕದಲ್ಲಿ ಕುನ್ವರ್ ಸಿಂಗ್ ಎಂಬ ವ್ಯಕ್ತಿ ತಳ್ಳು ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ.

ಮಂಗಳವಾರ ಬೆಳಗ್ಗೆ ಪಾಲಿಕೆಯ ಅಧಿಕಾರಿಗಳು ಗಾಡಿಗಳನ್ನು ತಪಾಸಣೆ ನಡೆಸಿದರು. ಕುನ್ವರ್ ಸಿಂಗ್ ಅವರ ತಳ್ಳುವಗಾಡಿ ನಿಗಮದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ 500 ರೂ.ಗಳ ಚಲನ್ ಅನ್ನು ನೀಡಿದರು.

ಈ ವೇಳೆ ಕುನ್ವರ್ ಪುತ್ರ ಅಧಿಕಾರಿಗಳನ್ನು ಅಡ್ಡಿಪಡಿಸಿದ್ದಾನೆ. ಇದರಿಂದ ಕೋಪಗೊಂಡ ಅಧಿಕಾರಿಗಳು ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕಪಾಳಮೋಕ್ಷ ಮಾಡಿದ ನಂತರ ಬಾಲಕನ ಸಹೋದರ ಅಭಿಷೇಕ್ ಅಧಿಕಾರಿಯ ಕೈ ಹಿಡಿದಿದ್ದಾನೆ. ಇದರಿಂದ ಕುಪಿತಗೊಂಡ ಅಧಿಕಾರಿಗಳು ಸಮೀಪದ ಕೆಲ ಕಿಡಿಗೇಡಿಗಳನ್ನು ಕರೆಸಿ ಇಡೀ ಕುಟುಂಬವನ್ನು ಥಳಿಸಿದ್ದಾರೆ. ರಕ್ಷಣೆಗೆ ಬಂದ ಮಹಿಳೆಯರು ಮತ್ತು ವೃದ್ಧರಿಗೂ ಥಳಿಸಿದ್ದಾರೆ.

Edited By : Nagesh Gaonkar
PublicNext

PublicNext

01/12/2021 05:54 pm

Cinque Terre

78.42 K

Cinque Terre

8