ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೂನಿವರ್ಸಿಟಿ ಹೆಸರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದ ದಂಧೆ ಬಯಲಿಗೆ

ಬೆಂಗಳೂರು: ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಜಾಲವನ್ನ ಪತ್ತೆ ಹಚ್ಚಿ ಆರೋಪಿಗಳನ್ನ ಬಂಧಿಸುವಲ್ಲಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿಗಳನ್ನ ರಾಕೇಶ್, ಕೃಷ್ಣ, ತನ್ಮಯ್ ಹಾಗೂ ಹೈದರ್ ಎಂದು ಗುರುತಿಸಲಾಗಿದ್ದು ವಿಚಾರಣೆಯಲ್ಲಿ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ.

ಡ್ರೀಮ್ ಎಜುಕೇಷನ್ ಸರ್ವಿಸ್ ಹೆಸರಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು,ಹೆಬ್ಬಾಳದ ಕೆಂಪಾಪುರ ಬಳಿಯಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಐವತ್ತು ಸಾವಿರಕ್ಕೆ ಒಂದರಂತೆ ಬಿ.ಕಾಂ, ಬಿಬಿಎಂ, ಡಿಗ್ರಿ ಸರ್ಟಿಫಿಕೇಟ್ ಗಳನ್ನ ಮಾರಾಟ ಮಾಡುತ್ತಿದ್ದರು.

ಮುಂಗಡ ಹಣಕೊಟ್ಟ ಒಂದು ತಿಂಗಳೊಳಗಾಗಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ.

ಯಾವ ಯಾವ ಯೂನಿವರ್ಸಿಟಿ ಅಂಕಪಟ್ಟಿ ನಕಲಿ ಗೊತ್ತಾ..?

1) ಐ.ಇ.ಸಿ.ಯೂನಿವರ್ಸಿಟಿ, ಹಿಮಾಚಲ ಪ್ರದೇಶ, 2) ಹಿಮಾಲಯ ಯೂನಿವರ್ಸಿಟಿ, ಹಿಮಾಚಲ್ ಪ್ರದೇಶ, 3) ಚೌದರಿ ಚರಣ್ ಸಿಂಗ್ ಯೂನಿವರ್ಸಿಟಿ, ಮೀರತ್, 4) ಛತ್ರಪತಿ ಸಾಹೂ ಮಹಾರಾಜ್ ಯೂನಿವರ್ಸಿಟಿ, ಕಾನ್ಸುರ, ಯು.ಪಿ. 5) ಕರ್ನಾಟಕ ಓಪನ್ ಯೂನಿವರ್ಸಿಟಿ, 6) ಕುವೆಂಪು ಯೂನಿವರ್ಸಿಟಿ, ಶಿವಮೊಗ್ಗ, 7) ಆರಣೆ ಯೂನಿವರ್ಸಿಟಿ, ಹಿಮಾಚಲ್ ಪ್ರದೇಶ, 8) ಮಹಾಮಾಯ ಯೂನಿವರ್ಸಿಟಿ, ಡೆಲ್ಲಿ. 9) ವಿಲಿಯಂ ಕ್ಯಾರಿ ಯೂನಿವರ್ಸಿಟಿ, ಮೇಘಾಲಯ, 10) ಕಳಿಂಗ ಯೂನಿವರ್ಸಿಟಿ, ಛತ್ತೀಸ್‌ಫಡ್, 10) ಪಾಂಡಿಚೆರಿ ಯೂನಿವರ್ಸಿಟಿ, ಪುದುಚೇರಿ, 11) ಸಿಕ್ಕೀಂ ಸ್ಟೇಟ್ ಯೂನಿವರ್ಸಿಟಿ, ಸಿಕ್ಕಿಂ 12) ಯೂನಿವರ್ಸಿಟಿ ಆಫ್ ಅಲಹಾಬಾದ್, ಅಲಹಾಬಾದ್, 13) ಪೆರಿಯಾರ್ ಯೂನಿವರ್ಸಿಟಿ, ತಮಿಳುನಾಡು 14) ಬೆಂಗಳೂರು ಯೂನಿವರ್ಸಿಟಿ, ಕರ್ನಾಟಕ, ಈ ವಿದ್ಯಾಸಂಸ್ಥೆಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡಲಾಗುತ್ತಿತ್ತು ಎಂದು ಪೊಲೀಸ್ ದಾಳಿಯಲ್ಲಿ ಕಂಡು ಬಂದಿದೆ.

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಬೋರ್ಡ್‌ ಹೆಸರಿನಲ್ಲಿ ಕೂಡ ನಕಲಿ

1) ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್ 2) ಯು.ಪಿ. ಬೋರ್ಡ್ ಆಫಎಕ್ಸಾಮಿನೇಷನ್ 3) ಹುಬ್ಬಳ್ಳಿ ಬೋರ್ಡ್ ಆಫ್ ಎಕ್ಸಾಮಿನೇಷನ್ 4) ತಮಿಳುನಾಡು ಬೋರ್ಡ್ಆಫ್ ಎಕ್ಸಾಮಿನೇಷನ್ 5) ಬಿಹಾರ್ ಸ್ಯಾಂಸ್ಕಟ್ ಬೋರ್ಡ್ 6) ಬಿಹಾರ್ ಬೋರ್ಡ್ ಆಫ್ ಓಪನ್ ಸ್ಕೂಲಿಂಗ್ 7) ಬೋರ್ಡ್ ಆಫ್ ಹೈಯರ್ ಸೆಕೆಂಡರಿ ಎಜುಕೇಷನ್, ಡೆಲ್ಲಿ, 8)ಜಾರ್ಕಾಂಡ್ ಸ್ಟೇಟ್ ಓಪನ್ ಸ್ಕೂಲ್ ರಾಂಚಿ.

ಈ ಹೆಸರಿನಲ್ಲಿ ಕೂಡ ನಕಲಿ ಮಾರ್ಕ್ಸ್ ಕಾರ್ಡ್ ಗಳು ಪೊಲೀಸರ ದಾಳಿಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By :
PublicNext

PublicNext

29/11/2021 04:44 pm

Cinque Terre

64.59 K

Cinque Terre

2

ಸಂಬಂಧಿತ ಸುದ್ದಿ