ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಿಜೆಪಿ ಶಾಸಕ ನೆಹರು ಓಲೇಕಾರ್ ಮೊಮ್ಮಕ್ಕಳು ನೇಣಿಗೆ ಶರಣು

ಹಾವೇರಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಬ್ಯಾಡಗಿಯ ವಿನಾಯಕ ನಗರ ನಿವಾಸಿಗಳಾದ ಚಂದ್ರು ಛಲವಾದಿ ಅವರ ಮಕ್ಕಳಾದ ನಾಗರಾಜ (16) ಹಾಗೂ ಭಾಗ್ಯಲಕ್ಷ್ಮೀ (18) ಆತ್ಯಹತ್ಯೆಗೆ ಶರಣಾದ ದುರ್ದೈವಿಗಳು. ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ನಾಗರಾಜ ನೇಣಿಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕ ಭಾಗ್ಯಲಕ್ಷ್ಮೀ ಸಹ ಅದೇ ನೇಣಿಗೆ ಕೊರಳೊಡ್ಡಿದ್ದಾಳೆ.

ತಮ್ಮನ ಸಾವಿನ ಸುದ್ದಿ ತಿಳಿದು ಕಾಲೇಜಿನಿಂದ ತಾಲೂಕಾಸ್ಪತ್ರೆಗೆ ಓಡೋಡಿ ಬಂದ ಅಕ್ಕ ಭಾಗ್ಯಲಕ್ಷ್ಮೀ ತಮ್ಮನ ಮುಖ ನೋಡಿ ದುಃಖಿತಳಾಗಿದ್ದಾಳೆ. ಸಾವಿನ ಶಾಕ್‌ನಿಂದ ಹೊರಬರಲಾರದೇ ಎಲ್ಲರೂ ಆಸ್ಪತ್ರೆಯಲ್ಲಿರುವಾಗ ಮನೆಗೆ ತೆರಳಿ ನಾಗರಾಜ ನೇಣು ಹಾಕಿಕೊಂಡಿದ್ದ ಸೀರೆಗೆ ತಾನೂ ನೇಣು ಬಿಗಿದುಕೊಂಡಿದ್ದಾಳೆ. ಅವಳು ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Edited By : Vijay Kumar
PublicNext

PublicNext

27/11/2021 09:39 pm

Cinque Terre

48.51 K

Cinque Terre

1