ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರದಲ್ಲಿ ಕಾಣೆಯಾದ ಶಿಕ್ಷಕ ವಿಜಯಪುರ ಕೃಷ್ಣ ನದಿ ತಟದಲ್ಲಿ ಶವವಾಗಿ ಪತ್ತೆ

ವಿಜಯಪುರ:ಕೋಲಾರ ಪಟ್ಟಣದ ಸರ್ಕಾರಿ ಶಾಲೆಯ ಶಿಕ್ಷಕ ಬಾಳಪ್ಪ ದಳವಾಯಿ ಅವರ ಶವ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಬಳಿಯ ಕೃಷ್ಣಾ ನದಿಯ ತಟದಲ್ಲಿ ಪತ್ತೆಯಾಗಿದೆ.

ಕಳೆದ 22 ರಂದು ಶಿಕ್ಷಕ ಬಾಳಪ್ಪ ಡೆತ್ ನೋಟ್ ಬರೆದಿದ್ದರು. ಜೀವನದಲ್ಲಿ ಜಿಗುಪ್ಸೆ ಆಗಿದೆ.ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ನನಗೆ ಬರುವ ಸೌಲಭ್ಯವನ್ನ ಒದಗಿಸಿ ಎಂದು ಡೆತ್ ನೋಟ್ ಬರೆದು ಕಾಣೆಯಾಗಿದ್ದರು. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಅವರ ಶವ ಬೆಳ್ಳುಬ್ಬಿ ಗ್ರಾಮದ ಕೃಷ್ಣಾ ನದಿಯ ತಟದಲ್ಲಿ ಪತ್ತೆಯಾಗಿದೆ.

Edited By :
PublicNext

PublicNext

26/11/2021 09:19 pm

Cinque Terre

43.87 K

Cinque Terre

0