ಚಿಕ್ಕಮಗಳೂರು : ಎಣ್ಣೆ ಏಟಲ್ಲಿ ಕಿರಿಕ್ ಮಾಡಿದ ಗುಂಪೊಂದು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.
ಸುಮಾರು 6 ರಿಂದ 7 ಜನ ಯುವಕರಿಂದ ಮೂವರ ಮೇಲೆ ಹಲ್ಲೆ ನಡೆದಿದೆ. ಪಾನಮತ್ತರ ಮಚ್ಚಿನಿಂದ ಮಾಡಿರುವ ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಯಾವುದೇ ಕಾರಣವಿಲ್ಲದೆ ಎಣ್ಣೆ ಏಟಲ್ಲಿ ಏಕಾಏಕಿ ಹಲ್ಲೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಮೂವರಿಗೂ ರಕ್ತ ಬರುವಂತೆ ಹೊಡೆದು ಪುಂಡರ ಗುಂಪು ಪರಾರಿಯಾಗಿದೆ.ಘಟನೆ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
26/11/2021 03:21 pm