ದೇವನಹಳ್ಳಿ : ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಮರೆಮಾಚಿ ಮಾದಕ ದ್ರವ್ಯವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯಕ್ಕೆ ಏರ್ ಕಾರ್ಗೋ ಮೂಲಕ ಕಳ್ಳಸಾಗಾಣಿಕೆ ಜಾಲವನ್ನ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಪತ್ತೆ ಮಾಡಿದೆ. 3 ಕೆ.ಜಿ. ತೂಕದ 50 ಲಕ್ಷ ಮೌಲ್ಯದ ಸ್ಯೂಡೋಫೆಡ್ರಿನ್ ಮಾದಕ ದ್ರವ್ಯವನ್ನ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾ ದೇಶಕ್ಕೆ ಡ್ರಗ್ಸ್ ಅನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು , ಇದರ ಮಾಹಿತಿ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ತಿಳಿದಿದ್ದು, ಇದೇ ವೇಳೆ ತಮಿಳುನಾಡಿನ ತಿರುಚ್ಚಿಯ ಕೊರಿಯರ್ ಏಜೆನ್ಸಿಯಲ್ಲಿ ಡ್ರಗ್ಸ್ ಬುಕ್ ಮಾಡಲಾಗಿದೆ.
ಎಂಬ ಸುಳಿವು ಅಧಿಕಾರಿಗಳಿಗೆ ಸಿಕ್ಕಿದೆ, ಚೆನೈ ಮೂಲದ ವ್ಯಕ್ತಿ ಎಲೆಕ್ಟ್ರಿಕ್ ಗಿಟಾರ್ ಬುಕ್ ಮಾಡಿದ. ಕೆಂಪು ಗಿಟಾರ್ ನ ಕಪ್ಪು ಬಣ್ಣದ ಅಂಚಿನಲ್ಲಿ ಸ್ಯೂಡೋಫೆಡ್ರಿನ್ ಮಾದಕ ದ್ರವ್ಯವನ್ನು ಏರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಕ್ಕೆ ಸಂಗೀತ ವಾದ್ಯ ಎಂದು ಪಾರ್ಸಲ್ ಮಾಡಲು ಸಿದ್ಧತೆ ನಡೆಸಿದರು.
ಸ್ಯೂಡೋಫೆಡ್ರಿನ್ ನಿಷೇಧಿತ ಮಾದಕ ದ್ರವ್ಯವನ್ನು ಮೆಥಿಲೆನೆಡಿಯೋಕ್ಸಿಮೆಥಾಂಫೆಟಮೈನ್ (MDMA) ತಯಾರಿಕೆಯಲ್ಲಿ ಬಳಸಲಾಗುತ್ತದೆ ಇದನ್ನು ಎಕ್ಸ್ಟಸಿ ಮಾತ್ರೆ ಎಂದು ಮಾದಕ ಲೋಕದಲ್ಲಿ ಮಾರಾಟವಾಗುತ್ತದೆ.
PublicNext
24/11/2021 05:36 pm