ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಅರಸಿಕೆರೆಯ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ಮೂರು ಕಡೆ ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಕೊಬ್ಬರಿ ಖರೀದಿ, ಮಾರಾಟ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಮೂವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.

ಉದ್ಯಮಿಗಳಾದ ರಂಗಸ್ವಾಮಿ, ಜೆ.ಡಿ ಮಹೇಶ್ವರಪ್ಪ, ಆರ್‌ಸಿಸಿ ರಜನಿಕಾಂತ್ ಮನೆ, ಕಚೇರಿ ಮೇಲೆ ಐಟಿ ರೈಡ್ ಮಾಡಲಾಗಿದ್ದು, ರಂಗಸ್ವಾಮಿಗೆ ಸೇರಿದ ಕೊಬ್ಬರಿ ಮಂಡಿ, ಅರಸೀಕೆರೆ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಅವರ ನಿವಾಸ ಎಪಿಎಂಸಿಯಲ್ಲಿರುವ ಅವರ ಒಡೆತನದ ಮಳಿಗೆಗಳ ಮೇಲೂ ಏಕಕಾಲಕ್ಕೆ ದಾಳಿ , ಕಡತ ಪರಿಶೀಲನೆ ಮಾಡಲಾಗುತ್ತಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ದಾಳಿ ಮಾಡಿ ಶೋಧಕಾರ್ಯ ಮುಂದುವರಿದಿದೆ. ಮೂವರು ಕೊಬ್ಬರಿ ಮಂಡಿಯ ಜೊತೆಗೆ ಬೇರೆ ಬೇರೆ ಬ್ಯುಸಿನೆಸ್‌ಗಳನ್ನು ಹೊಂದಿದ್ದಾರೆ.

Edited By : Vijay Kumar
PublicNext

PublicNext

24/11/2021 02:39 pm

Cinque Terre

34.23 K

Cinque Terre

0

ಸಂಬಂಧಿತ ಸುದ್ದಿ