ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 20 ನಿಮಿಷ ಕಾದರೂ ಬರದ ಆ್ಯಂಬುಲೆನ್ಸ್- BWSSB ವಾಲ್ ಚೇಂಬರ್​ನಲ್ಲೇ ಜೀವ ಬಿಟ್ಟ ಕಾರ್ಮಿಕ

ಬೆಂಗಳೂರು: ಬಿಡಬ್ಲ್ಯೂಎಸ್​ಎಸ್​ಬಿ ವಾಲ್ ಚೇಂಬರ್‌ನಲ್ಲಿ ಕಾರ್ಮಿಕನೊಬ್ಬ ಬಿದ್ದು ಸಾವನ್ನಪ್ಪರುವ ಘಟನೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೋಹನ್ ಮೋಹನ್ (18) ಮೃತ ಕಾರ್ಮಿಕ. ಮೋಹನ್ ಕಳೆದ 6 ತಿಂಗಳಿಂದ ವಾಲ್ ಮೆನ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ 9:30ರ ಸುಮಾರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 6 ಬಳಿ ಇರುವ ಚೇಂಬರ್ ಬಳಿ ನೀರಿನ ವಾಲ್ ತಿರಿಗಿಸೋಕೆ ಹೋಗಿದ್ದ. ಆದರೆ ಏಕಾಏಕಿ ಮೋಹನ್ ಚೇಂಬರ್‌ನಲ್ಲಿಯೇ ಕುಸಿದು ಬಿದ್ದಿದ್ದ. ಈ ವೇಳೆ ಜೊತೆಯಲ್ಲೇ ಇದ್ದ ಮತ್ತೊಬ್ಬ ಸಿಬ್ಬಂದಿ ಪುನೀತ್ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆದರೆ ಇಪ್ಪತ್ತು ನಿಮಿಷ ಕಳೆದರೂ ಆ್ಯಂಬುಲೆನ್ಸ್ ಬರದ ಹಿನ್ನೆಲೆಯಲ್ಲಿ ಆಟೋ ಮೂಲಕ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಆಸ್ಪತ್ರೆಗೆ ಹೋಗೋವಷ್ಟರಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾನೆ. ಈವರೆಗೂ ಚೆಂಬರ್‌ನಲ್ಲಿ ಬಿದ್ದು ಯಾವುದೇ ಸಾವಾಗಿಲ್ಲ. ಚೇಂಬರ್ ನಾಲ್ಕೈದಡಿ ಇರುತ್ತೆ. ಕಳೆದ 25ವರ್ಷದಿಂದ ಬಿಡಬ್ಲೂಎಸ್‌ಎಸ್ ಬಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈವರೆಗೂ ಅಂತಹ ಘಟನೆ ನಡೆದಿಲ್ಲ. ಬಿದ್ದರೆ ಸಣ್ಣ ಪುಟ್ಟ ಗಾಯಗಳಾಗುತ್ತವೆ. ಮೋಹನ್ ಸಾವಿಗೆ ನಿಖರ ಕಾರಣ ಏನು ಅಂತ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಬೇಕಿದೆ ಅಂತ ಬಿಡಬ್ಲ್ಯೂಎಸ್​ಎಸ್​ಬಿ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

Edited By : Vijay Kumar
PublicNext

PublicNext

24/11/2021 07:31 am

Cinque Terre

53.51 K

Cinque Terre

0

ಸಂಬಂಧಿತ ಸುದ್ದಿ