ಕಲಬುರಗಿ: ಕಲಬುರಗಿಯಲ್ಲಿ ಮಾನವ ಕಳ್ಳಸಾಗಾಣಿಕೆಯ ಪ್ರಕರಣವೊಂದು ಬಯಲಿಗೆ ಬಂದಿದೆ. ರೈಲು ನಿಲ್ದಾಣದಲ್ಲಿ 12 ವರ್ಷದ ಬಾಲಕಿ, ಯುಕವನೊಂದಿಗೆ ಕಿತ್ತಾಡಿ ಕೆಳಗಿಳದ ಬಳಿಕವೇ ಮಾನವ ಕಳ್ಳಸಾಗಾಣಿಕೆ ಈ ಘಟನೆ ಬಯಲಿಗೆ ಬಂದಿದೆ.
ಬೆಂಗಳೂರಿನಿಂದ ಮುಂಬೈಗೆ ಅಲ್ಪಸಂಖ್ಯಾತ ಸಮುದಾಯದ 12 ವರ್ಷದ ಬಾಲಕಿಯನ್ನ ಮುಂಬೈ ಮೂಲದ ವಿವೇಕ್ ಅನ್ನೋ ಯುವಕನೊಬ್ಬ ರೈಲಿನಲ್ಲಿ ಒತ್ತಾಯಪೂರ್ವಕವಾಗಿಯೇ ಕರೆದುಕೊಂಡು ಹೋಗುತ್ತಿದ್ದ.
ಆದರೆ ಕಲಬುರಗಿ ರೈಲು ನಿಲ್ದಾಣ ಬಂದಾಗ ಆ ಹುಡುಗಿ, ಯುವಕನೊಂದಿಗೆ ಕಿತ್ತಾಡಿಕೊಂಡು ಕೆಳಗಿಳಿದಿದ್ದಾಳೆ. ಆಗಲೇ ಮಾನವ ಕಳ್ಳಸಾಗಾಣಿಕೆ ಈ ಪ್ರಕರಣ ಬಯಲಾಗಿದೆ.ಯುವಕನನ್ನ ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚೈಲ್ಡ್ ಲೈನ್ ಅವರು ಬಾಲಕಿಯನ್ನ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.
PublicNext
22/11/2021 05:15 pm