ದಾವಣಗೆರೆ: ಮರದ ಕೊಂಬೆಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಹೊರಭಾಗದಲ್ಲಿರುವ ಶ್ರೀ ಕಲ್ಲೇಶ್ವರ ದೇವಸ್ಥಾನ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿರುವ ವ್ಯಕ್ತಿಯ ಹೆಸರು ಮಂಜುನಾಥ ಎಂದು ಹೇಳಲಾಗಿದೆ. ಈತ ತಡರಾತ್ರಿ ದೇಗುಲದ ಬಳಿ ಇರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಳಿಕ ಈತ ಕಾಣದೆ ಇದ್ದಾಗ ಈತನ ಮನೆಯವರು ಬಂದು ಹುಡುಕಾಡಿದರೂ ಸಿಕ್ಕಿಲ್ಲ. ಆದರೆ, ಹುಣಸೆ ಮರದಲ್ಲಿ ಮಂಜುನಾಥನ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಜುನಾಥ ತಂದೆ ಹೆಸರು ಕುಂಬಳೆ ಬಸಪ್ಪ. ಪತ್ನಿ ನೇತ್ರ ಹಾಗೂ ಮಂಜುನಾಥ್ ನಡುವೆ ಜಗಳವಾಗಿದ್ದು, ಬಳಿಕ ಮನೆಬಿಟ್ಟು ಬಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
PublicNext
22/11/2021 03:11 pm