ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಮೂಲಕ ಇಬ್ಬರು ಮನೆಗಳ್ಳರನ್ನು ಬಂಧಿಸಿ ಸುಮಾರು 50 ಲಕ್ಷ ಮೌಲ್ಯದ 1 ಕೆ.ಜಿ 120 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಮಶೇಖರ್, ಪ್ರಜ್ವಲ್, ಮಾದೇಶ್ ಬಂಧಿತ ಆರೋಪಿಗಳು ಮೋಜಿನ ಜೀವನಕ್ಕಾಗಿ ಇವರು ಕಳ್ಳತನ ಮಾಡುತ್ತಿದ್ದರು ಹಾಗೂ ಚಾಲಕಿ ಖದೀಮರು
ಪೋನ್ ಬಳಸದೆ ಟೆಕ್ನಿಕಲ್ ಪ್ಲಾನ್ ಬಳಸಿ ಕೃತ್ಯ ಎಸಗುತ್ತಿದ್ದರು ಎಂದು ಹೇಳಲಾಗಿದೆ.
ವಾಟ್ಸ್ಯಾಪ್ ಮತ್ತು ಇನ್ಸ್ಟಾಗ್ರಾಂ ಕಾಲ್ ಮೂಲಕ ಆರೋಪಿಗಳು ಸಂವಹನ ನಡೆಸುತ್ತಿದ್ದರು ಕೃತ್ಯದ ಬಳಿಕ ಒಂದೊಂದು ದಿನ ಒಂದೊಂದು ಕಡೆ ಉಳಿದುಕೊಳ್ತಿದ್ರು.
ಇತ್ತೀಚಿಗೆ ಕುಂಬಳಗೋಡಿನಲ್ಲಿ ನಡೆದ ಕಳ್ಳತನದಲ್ಲಿ ಸೋಮಶೇಖರ್ ಪಾತ್ರ ಕಂಡು ಬಂದಿತ್ತು. ಕೃತ್ಯದ ಸ್ಥಳದಲ್ಲಿ ಸೋಮಶೇಖರ್ ಫಿಂಗರ್ ಪ್ರಿಂಟ್ ದೊರೆತ ಬಳಿಕ ಪೊಲೀಸರು ಅಲರ್ಟ್ ಆಗಿದ್ದರು.
ಆರೋಪಿಗಳ ಬಂಧನದಿಂದ ಕೆ.ಆರ್.ಪುರಂ ಠಾಣೆಯ 4, ಬಾಗಲಗುಂಟೆಯ 2, ಎಚ್.ಎ.ಎಲ್, ಕುಂಬಳಗೋಡು, ಬಂಡೇಪಾಳ್ಯ, ಮಾಗಡಿ ರಸ್ತೆ, ಜೆ.ಪಿ ನಗರ ಠಾಣೆಯ ತಲಾ 1 ಸಿಟಿ ಮಾರ್ಕೆಟ್ ಠಾಣೆಯ 2 ಪ್ರಕರಣ ಪತ್ತೆಯಾಗಿದೆ.
PublicNext
19/11/2021 02:23 pm