ಮೈಸೂರು: ನಗರದ ಟ್ರಾಫಿಕ್ ಎಎಸ್‌ಐ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿ ಶಂಕರ ನಗರದಲ್ಲಿ ನಡೆದಿದೆ.
ವಿವಿ ಪುರಂ ಟ್ರಾಫಿಕ್ ಠಾಣೆಯ ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್‌ಐ. ಶಿವಕುಮಾರಸ್ವಾಮಿ ಅವರು ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
14/11/2021 02:39 pm