ಕೊಚ್ಚಿ(ಕೇರಳ): ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದ್ದ ಇಬ್ಬರು ಮಾಡೆಲ್ ಗಳ ಕೇಸ್ ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಅಪಘಾತ ನಡೆದ ಸುತ್ತಲಿನ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮಾಡೆಲ್ ಗಳು ಇದ್ದ ಕಾರನ್ನು ಇನ್ನೊಂದು ಕಾರು ಹಿಂಬಾಲಿಸಿದ್ದು ಕಂಡು ಬಂದಿದೆ. ಹೀಗಾಗಿ ಇದು ಹಿಟ್ & ರನ್ ಇರಬಹುದಾ? ಎಂಬ ಅನುಮಾನ ವ್ಯಕ್ತವಾಗಿದೆ.
ಅಪಘಾತಕ್ಕೂ ಮುನ್ನ ಕೊಚ್ಚಿ ನಗರದ ಪ್ರತಿಷ್ಟಿತ ಐಷಾರಾಮಿ ಹೊಟೇಲ್ ನಲ್ಲಿ ಮಾಡೆಲ್ ಗಳಾದ ಅನ್ಸಿ ಕಬೀರ್ ಹಾಗೂ ಅಂಜನಾ ಶಾಜನ್ ಡಿಜೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೇ ದೃಶ್ಯ ಇರುವ ಡಿವಿಆರ್ ಅನ್ನು ಹೊಟೇಲ್ ಮಾಲೀಕ ಹೊತ್ತೊಯ್ದು ಪರಾರಿಯಾಗಿದ್ದಾನೆ. ಹೀಗಾಗಿ ಹೊಟೇಲ್ ಮಾಲೀಕನ ಮೇಲೆ ಪೊಲೀಸರ ಅನುಮಾನ ದಟ್ಟವಾಗಿದೆ. ಇನ್ನು ಅಪಘಾತವಾದಾಗ ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ಬದುಕುಳಿದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
PublicNext
14/11/2021 02:08 pm