ದಾವಣಗೆರೆ:ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ರೈತರಿಗೆ ವಂಚಿಸಿದ್ದ ಆರೋಪಿಗಳಿಂದ ಇಲ್ಲಿಯ ಪೊಲೀಸರು ಹಣ ವಸೂಲಿ ಮಾಡಿದ್ದಾರೆ. ದಾವಣಗೆರೆಯ ಡಿಸಿಆರ್ ಬಿ ಪೊಲೀಸ್ ತಂಡದ ಕಾರ್ಯಾಕ್ಕೆ ಮೆಚ್ಚಿ ಐಜಿಪಿ ಎಸ್.ರವಿ ಮತ್ತು ಎಸ್ಪಿ ಸಿಬಿ ರಿಷ್ಯಂತ್ ರಿಂದ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಡಿಸಿಆರ್ ಬಿ ಪೊಲೀಸರು ಎರಡು ಕೋಟಿಗೂ ಅಧಿಕ ಮೊದ್ದವನ್ನ ವಶಪಡಿಸಿಕೊಂಡಿದ್ದರು.ಜಿಎಂಸಿ ಪರ್ಟಿಲೈಜರ್ಸ್ ಮಾಲೀಕರಿಂದ ಜಗಳೂರು ಸೇರಿದಂತೆ ವಿವಿಧೆಡೆ ವಂಚನೆ ಆಗಿತ್ತು.ಡಿವೈಎಸ್ಪಿ ಬಸವರಾಜ್ ನೇತೃತ್ವದ ದಾವಣಗೆರೆ ಡಿಸಿಆರ್ ಬಿ ತಂಡ ಸೂಕ್ತ ಕಾರ್ಯಾಚರಣೆ ನಡೆಸಿದೆ. ರೈತರಿಗೆ ಹಣ ವಿತರಿಸಲೂ ಶ್ರಮಿಸಿದೆ.ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿಯೇ ಇದೆ.
PublicNext
13/11/2021 12:02 pm