ತುಮಕೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಇನ್ನೋರ್ವ ಯುವಕನ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಿದೆ. ತುಮಕೂರು ನಗರದ ಎಂ. ಜಿ ರಸ್ತೆಯ ಕೃಷ್ಣ ಟಾಕೀಸ್ ಹಿಂಭಾಗದಲ್ಲಿ ಈ ಘಟನೆ ನಡೆದಿದೆ.
ಕೂಲ್ ಡ್ರಿಂಕ್ಸ್ ಟ್ರೇನಿಂದ ತಲೆಗೆ ಹೊಡೆದ ಯುವಕರ ಗುಂಪು ಯುವಕನಿಗೆ ಹೊಡೆದಿದೆ. ಹೊಡೆದಾಟದ ದೃಶ್ಯ ಸಾರ್ವಜನಿಕರ ಮೊಬೈಲ‌್‌ನಲ್ಲಿ ಸೆರೆಯಾಗಿದೆ. ಹಲ್ಲೆಗೆ ಕಾರಣವೇನೆಂದು ಪೊಲೀಸರ ತನಿಖೆ ನಂತರವಷ್ಟೇ ತಿಳಿದು ಬರಲಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
12/11/2021 11:01 am