ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆರೆ ಮನೆಯವನಿಂದ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ : ಆರೋಪಿ ಅರೆಸ್ಟ್

ಶಿವಮೊಗ್ಗ: ನೆರೆಹೊರೆಯವರನ್ನು ಅಣ್ಣ ತಮ್ಮಾ ಎಂದು ಗೌರವಿಸುವವರ ಮಧ್ಯೆ ಇಲ್ಲೊಬ್ಬ ರಾಕ್ಷಸ ಪಕ್ಕದ ಮನೆಯ 3 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಹೌದು ಮಗುವಿಗೆ ಆಮಿಷವೊಡ್ಡಿದ ಯುವಕ ಮಗುವನ್ನು ತನ್ನ ಮನೆಗೆ ಕರೆದೊಯ್ದು ಈ ನೀಚ ಕೃತ್ಯವೆಸಗಿದ್ದಾನೆ.

ಇನ್ನು ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ಹೇಯ ಕೃತ್ಯ ಬಯಲಾಗಿದೆ. ಸದ್ಯ ಆರೋಪಿ ಯುವಕನನ್ನು ಹಿಡಿದ ಪೋಷಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

11/11/2021 09:38 pm

Cinque Terre

32.39 K

Cinque Terre

11

ಸಂಬಂಧಿತ ಸುದ್ದಿ