ಗಾಂಧಿನಗರ: ಗುಜರಾತ್‌ನ ಕರಾವಳಿಯ ಮೂಲಕ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡುವ ಜಾಲವನ್ನು ಭೇದಿಸಿರುವ ಪೊಲೀಸರು, ರಾಜಸ್ಥಾನದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ದ್ವಾರಕಾ-ಖಂಭಾಲಿಯಾ ಹೆದ್ದಾರಿಯಲ್ಲಿ ತೀವ್ರ ಶೋಧಕಾರ್ಯದ ವೇಳೆ ಕಾರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಖಂಭಾಲಿಯಾ ಆರಾಧನಾ ಧಾಮ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಅಂದಾಜು 66 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇವರ ಬೆಲೆ 350 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಗುಜರಾತ್‌ನ ಕಚ್‌ನಲ್ಲಿರುವ ಮುಂದ್ರಾ ಬಂದರಿನಲ್ಲಿ 3,000 ಕೆಜಿ ಡ್ರಗ್ಸ್ ಪತ್ತೆಯಾಗಿತ್ತು.
PublicNext
10/11/2021 04:23 pm