ಚಿಕ್ಕಮಗಳೂರು: ಮಲೆನಾಡಿನ ನಕ್ಸಲ್ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಕೇರಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದ ಚಿಕ್ಕಮಗಳೂರು ತಾಲ್ಲೂಕಿನ ಬುಕ್ಕಡಿ ಬೈಲಿನ ಬಿ.ಜಿ.ಕೃಷ್ಣಮೂರ್ತಿ 2003 ರಿಂದ ಭೂಗತನಾಗಿದ್ದ, 2018ರಲ್ಲಿ ಅವರ ತಂದೆ ಗೋಪಾಲ ರಾವ್ (81) ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್‌ಎಲ್‌ಬಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದ. ವಿದ್ಯಾರ್ಥಿ ಜೀವನದಲ್ಲಿಯೇ ಈತ ಮಾವೋ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದ.
2000ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭ ಚುರುಕುಗೊಂಡ ನಕ್ಸಲ್ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸದ್ಯ 48 ವರ್ಷದ ಬಿ.ಜಿ ಕೃಷ್ಣಮೂರ್ತಿ ಮೇಲೆ ರಾಜ್ಯದ ವಿವಿಧ ಪೋಲಿಸ್ ಠಾಣೆಯಲ್ಲಿ ಸುಮಾರು 53 ಕೇಸ್ ಗಳಿವೆ ಹಾಗೂ ಕಳಸ ತಾಲೂಕಿನ ಜರಿಮನೆ ಮಾವಿನಕೆರೆಯ 36 ವರ್ಷದ ಸಾವಿತ್ರಿ ಮೇಲೆ 22 ಕೇಸ್ ಗಳಿವೆ.
PublicNext
10/11/2021 09:34 am