ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಹುಡುಗಿಯೊಂದಿಗೆ ಹುಡುಗನ ಪೊಟೋ ಎಡಿಟ್ ಆರೋಪ, ಹಿಗ್ಗಾಮುಗ್ಗಾ ಥಳಿಸಿದ ಮನೆಮಂದಿ

ಯಾದಗಿರಿ: ಸಂಬಂಧದಲ್ಲಿ ತನಗೆ ತಂಗಿ ಆಗುತಿದ್ದ ಹುಡುಗಿಯ ಜೊತೆ ಯುವಕನೋರ್ವ ತನ್ನ ಪೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ, ಇದರಿಂದ ಕೋಪಗೊಂಡ ಹುಡುಗಿ ಮನೆಯವರು ಹುಡುಗನಿಗೆ ದೊಣ್ಣೆಯಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಶಹಾಪುರ ತಾಲೂಕಿನ ಸಗರ ಗ್ರಾಮದ ಪಕ್ಕದಲ್ಲಿರುವ ವಿರುಪಾಪುರ ದೊಡ್ಡಿಯ ಯುವಕನಾದ ಈತ,"

ನಾನು ಪೋಸ್ಟ್ ಮಾಡಿಲ್ಲ, ಕೈ ಮುಗಿತೀನಿ, ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡ್ರಪ್ಪೋ" ಎಂದು ಎಷ್ಟು ಗೋಗರೆದರೂ ಕೇಳದೆ ಮನಬಂದಂತೆ ಥಳಿಸಿದ್ದಾರೆ.

ಯುವಕನಿಗೆ ಇಬ್ಬರು ವ್ಯಕ್ತಿಗಳು ದೊಣ್ಣೆಯಿಂದ ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Edited By : Shivu K
PublicNext

PublicNext

05/11/2021 10:57 am

Cinque Terre

87.36 K

Cinque Terre

4

ಸಂಬಂಧಿತ ಸುದ್ದಿ