ಚಿಕ್ಕಮಗಳೂರು : ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಯುವಕನನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆಮಾಡಲಾಗಿದೆ.
ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪ್ರಕೃತ್(29) ಮೃತ ದುರ್ದೈವಿ. ಈತ ಕಾಫಿತೋಟಕ್ಕೆ ಹೋಗಿ ಹಿಂದಿರುಗುವಾಗ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ.
ಮೃತನ ಮನೆಯಲ್ಲಿ ಪೋಷಕರ, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು,ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
03/11/2021 01:12 pm