ಬೆಳಗಾವಿ : ಇಂದು 66 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನಲ್ಲಿ ರಾಜ್ಯೋತ್ಸವ ಆಚರಣೆಯ ಮಧ್ಯೆ ಎಂಇಎಸ್ ಮತ್ತೆ ತನ್ನ ಪುಂಡಾಟಿಕೆ ಮೆರೆದಿದೆ. ಸದ್ಯ ಎಂಇಎಸ್ ಮುಖಂಡ ಶುಭಂ ಶಳಕೆ ಕನ್ನಡಿಗರನ್ನ ಕೆರಳಿಸುವ ಪೋಸ್ಟ್ ವೊಂದನ್ನಾ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಇನ್ನು ವಿವಾದಾತ್ಮಕ ನಕ್ಷೆ ಇದಾಗಿದ್ದು ನಾಡದ್ರೋಹಿ ಸಂಯುಕ್ತ ಮಹಾರಾಷ್ಟ್ರ ಪರಿಕಲ್ಪನೆ ನಕ್ಷೆಯಲ್ಲಿ ಬೆಳಗಾವಿ, ಕಾರವಾರ, ಹಳ್ಯಾಳ ನಿಪ್ಪಾಣಿ, ಬೀದರ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಫೋಟೋ ಪೋಸ್ಟ್ ಆಗಿದೆ.
ನವೆಂಬರ್ 1 ಕರಾಳ ದಿನ ಎಂದು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಮುಖಂಡ ಪೋಸ್ಟ್ ಮಾಡಿದ್ದಾನೆ. ನಾವು ಬೆಳಗಾವಿಯವರು, ಬೆಳಗಾವಿ ಮಹಾರಾಷ್ಟ್ರದ್ದು ಎಂದು ಘೋಷ ವಾಕ್ಯ ಹಾಕಿದ ಪುಂಡರು ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ವಿಪರ್ಯಾಸವೆಂದರೆ ಇವರ ಈ ಪುಂಡಾಟವನ್ನು ನೋಡಿಯೂ ಬೆಳಗಾವಿ ಪೊಲೀಸ್ ಕಮೀಷನರ್ ಕಣ್ಣಮುಚ್ಚಿ ಕುಳಿತ್ತಿದ್ದಾರೆ.
ಧರಣಿ ಹೆಸರಿನಲ್ಲಿ ಅನುಮತಿ ಪಡೆದ ಪುಂಡರಿಂದ ಇಂದು ಕರಾಳ ದಿನ ಎಂದು ಸಾಮಾಜಿಕ ಜಾಲತಾಣದಲ್ಲಿ ಗಡಿ ವಿವಾದದ ಕಿಚ್ಚು ಹಚ್ಚುತ್ತಿದ್ದಾರೆ. ಅಷ್ಟೇ ಅಲ್ಲದೆ ಕರಾಳ ದಿನ ಎಂದು ಮೆರವಣಿಗೆ ಮಾಡುತ್ತಿರುವುದಕ್ಕೆ ಸದ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಬೆಳಗಾವಿ ಪೊಲೀಸ್ ಕಮೀಷನರ್ ಬೆಳಗಾವಿ ಮರಾಠ ಮಂದಿರದಲ್ಲಿ ಪ್ರತಿಭಟನೆ ಸಭೆ ನಡೆಸಿದ ಪುಂಡರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪ್ರತಿಭಟನಾ ಸಭೆ ನಡೆಸಲು ಅನುಮತಿ ಪಡೆದು ಪುಂಡಾಟಿಕೆ ಮೆರೆಯುತ್ತಿದ್ದಾರೆ.
ಈ ನಾಡದ್ರೋಹಿಗಳಿಗೆ ಕೋವಿಡ್ ನಿಯಮ ಮರೆಯದಂತೆ ಸೂಚನೆ ನೀಡಲಾಗಿದೆ.
PublicNext
01/11/2021 11:17 am