ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬಾಲಕಿ ಅಪಹರಣ ಕೇಸ್: ನಾಲ್ವರು ಅರೆಸ್ಟ್, ಓರ್ವ ಪರಾರಿ

ಬಾಗಲಕೋಟೆ: ಬಾಗಲಕೋಟೆಯ ನವನಗರದಲ್ಲಿ ಬಾಲಕಿಯೋರ್ವಳು ಟ್ಯೂಷನ್ ಮುಗಿಸಿಕೊಂಡು ಬರುವಾಗ ಚಾಕಲೇಟ್ ಕೊಡುವ ನೆಪದಲ್ಲಿ ಅಪಹರಿಸಿದ ಕೇಸ್ ಗೆ ಸಂಬಂದಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆದ್ದಿರುವ ಕ್ಯಾಸಿನೊ ಹಣ ಹೊಡೆಯಲೆಂದು ಬಾಲಕಿ ಅಪರಹಣ ಮಾಡಿದ್ದರು. ಆರೋಪಿಗಳನ್ನು ಕೇವಲ 18ಗಂಟೆಯಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಗದ್ದನಕೇರಿ ಗ್ರಾಮದ ಬೀರಪ್ಪ ಬೂದಿಹಾಳ,ಪ್ರಫುಲ್ ಪಾಟೀಲ್,ಈರಣ್ಣ ದಿವಟಗಿ, ಕಮತಗಿ ಗ್ರಾಮದ ಕೃಷ್ಣಾ ದಾಸರ ಬಂಧಿತ ಆರೋಪಿಗಳಾಗಿದ್ದು , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಓರ್ವ ಆರೋಪಿ ಪರಾರಿಯಾಗಿದ್ದಾನೆ.ಬಾಲಕಿಗೆ ವಾಪಸ್ ಬಿಡಲು 50ಲಕ್ಷ ಬೇಡಿಕೆ ಮೊಬೈಲ್ ಕರೆ ಆಧರಿಸಿ ಪ್ರಕರಣ ಬೇಧಿಸಲಾಗಿದೆ. ಆರೋಪಿತರು ಬಾಲಕಿಯನ್ನು ಸ್ವೀಫ್ಟ್ ಕಾರಿನಲ್ಲಿ ಹುಬ್ಬಳ್ಳಿ,ಗದಗ ಕಡೆಗಳಲ್ಲೆಲ್ಲಾ ಸುತ್ತಾಡಿ ಕೊನೆಗೆ ಬಾಲಕಿ ಮನೆ ಮುಂದೆ ಬಿಟ್ಟು ಹೋಗಿದ್ದರು. ಬಂಧಿತರಿಂದ ಎರಡು ಸ್ವೀಫ್ಟ್ ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಜಗಲಾಸರ ತಿಳಿಸಿದರು.

Edited By : Nagaraj Tulugeri
PublicNext

PublicNext

30/10/2021 05:08 pm

Cinque Terre

84.78 K

Cinque Terre

4

ಸಂಬಂಧಿತ ಸುದ್ದಿ