ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಾಯಿ-ಮಗಳು: ಕೇಸ್ ದಾಖಲು

ಮುಂಬೈ: ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ನಿರ್ಭಯಾ ಸ್ಕ್ವಾಡ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ ಘಟನೆ ಮುಂಬೈನ ಮಲಾಡ್‌ ಮಾರುಕಟ್ಟೆಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ತಾಯಿ-ಮಗಳ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.

ಮಲಾಡ್‌ನ ಶಾಪಿಂಗ್ ಸೆಂಟರ್ ಬಳಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ. ಸರಿಯಾಗಿ ಕಾರ್ ಪಾರ್ಕ್‌ ಮಾಡದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ಮಹಿಳೆಯರ ಮೇಲೆ ಗರಂ ಆಗಿದ್ದರು. ಕಾರ್‌ ಸರಿಯಾಗಿ ಪಾರ್ಕ್ ಮಾಡುವಂತೆ ಸೂಚನೆ ನೀಡಿದಾಗ ಮಹಿಳೆಯರು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Shivu K
PublicNext

PublicNext

29/10/2021 06:45 pm

Cinque Terre

118.51 K

Cinque Terre

2