ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಣಿಕೆಗೆ ಕೊರಳೊಡ್ಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಹಾಸನ: ಆತ ಇನ್ನು ಬಾಳಿ ಬದುಕಬೇಕಾದ ಯುವಕ ಹೆತ್ತವರು ಮಗನ ಮೇಲೆ ಅಪಾರ ಕನಸು ಕಟ್ಟಿಕೊಂಡಿದ್ದರು ಆದ್ರೆ ಮಗ ಮಾತ್ರ ದುಡುಕಿನ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾನೆ.ಹೌದು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಹೊರವಲಯದ ಕಾಲೇಜೊಂದರ ಹಾಸ್ಟೆಲ್ ನಲ್ಲಿ ನಡೆದಿದೆ.

ಹೇಮಂತ್ ಗೌಡ (20) ನೇಣು ಹಾಕಿಕೊಂಡ ವಿದ್ಯಾರ್ಥಿ. ಈತ ಅರಸಿಕೆರೆಯ ಹಿರಿಯಾಳು ಗ್ರಾಮದ ತೌಪೇಗೌಡ-ಜಯಂತಿ ದಂಪತಿಯ ಪುತ್ರ ಎನ್ನಲಾಗಿದೆ.ಈ ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಾಸ್ಟೆಲ್ ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

26/10/2021 07:20 am

Cinque Terre

61.62 K

Cinque Terre

4