ಕೋಲಾರ: ಜಿಲ್ಲೆಯ ಕೆಜಿಎಫ್ ಚಾಂಫಿಯನ್ ರೀಫ್ಸ್‌ನ ಇಟಿ ಬ್ಲಾಕ್‌ನಲ್ಲಿ ಎರಡು ರೌಡಿಗಳ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ಈ ಗ್ಯಾಂಗ್ ವಾರ್‌ನಲ್ಲಿ ಓರ್ವನ ಹತ್ಯೆ ನಡೆದಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ರಾಜಕುಮಾರ್ ಹಾಗೂ ಜೈಕಾಂತ್ ಬಣಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. ಇದರಲ್ಲಿ ರಾಜಕುಮಾರ್‌ನನ್ನು ಹತ್ಯೆ ಮಾಡಲಾಗಿದ್ದು, ಇತನ ತಂಡದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಎರಡು ಕಾರಿನಲ್ಲಿ ಬಂದ ಜೈಕಾಂತ್ ಟೀಂನ ಐವರು ರಾಜಕುಮಾರ್ ಟೀಂನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹಲ್ಲೆಯ ಬಳಿಕ ಜೈಕಾಂತ್ ಟೀಂ ಬಂದಿದ್ದ ಕಾರುಗಳಲ್ಲಿಯೇ ತಮಿಳುನಾಡು ಕಡೆ ಪರಾರಿಯಾಗಿದೆ.
ಜೈಕಾಂತ್ ಟೀಂಗೆ ಸ್ಥಳೀಯರು ಸಾಥ್ ಕೊಟ್ಟಿರುವ ಅನುಮಾನ ವ್ಯಕ್ತವಾಗಿದೆ. ರಾಬರ್ಟ್ ಸನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಬಳಸಿದ್ದ ಕಾರುಗಳು ಸೇರಿದಂತೆ ಹಲವು ವಸ್ತುಗಳು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
24/10/2021 11:18 am