ಬಲಿಯಾ : 17 ವರ್ಷದ ಬಾಲಕಿಯನ್ನು ಅಪಹರಿಸಿದ ಕಾಮುಕನೊಬ್ಬ ಕಳೆದ ಒಂಬತ್ತು ತಿಂಗಳಿನಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಲಿಯಾ ಜಿಲ್ಲೆಯ ನರಹಿ ಗ್ರಾಮದ ಬಾಲಕಿಯನ್ನು ಅಪಹರಿಸಿ ವಾರಣಾಸಿಗೆ ಕರೆತಂದ ಕಾಮುಕ 9 ತಿಂಗಳಿನಿಂದ ನಿರಂತರ ಆತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನನ್ನು ಅಪಹರಿಸಿ ವಾರಾಣಾಸಿಯಲ್ಲಿ ಬಂಧಿಸಿಟ್ಟಿದ್ದ ಕಾಮುಕ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಕಾಮುಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
PublicNext
23/10/2021 06:58 pm