ಬೆಂಗಳೂರು: ಬೆಂಗಳೂರು ನಗರದ ಎನ್‌ಸಿಬಿ ಟೀಂ ಭರ್ಜರಿ ಬೇಟೆಯಾಡಿದೆ. ಲೆಹೆಂಗಾ ದಿರಿಸಿನ ಫಾಲ್ಸ್‌ನಲ್ಲಿ ಇಟ್ಟು ಸಾಗಿಸಲಾಗುತ್ತಿದ್ದ ಮಾದಕ ವಸ್ತುವನ್ನು ಮತ್ತೆ ಹಚ್ಚಿದ್ದಾರೆ.
ಎರಡು ಪ್ರತ್ಯೇಕ ಪ್ರಕರಗಳನ್ನು ಬೇಧಿಸಿರುವ ಎನ್‌ಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಹೈದರಾಬಾದ್‌ನಿಂದ ಆಸ್ಟ್ರೇಲಿಯಾಗೆ ಲೆಹೆಂಗಾದದಲ್ಲಿ ಹೈ ಎಂಡ್ ಡ್ರಗ್ ಸಾಗಿಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಎನ್‌ಸಿಬಿ ಪೊಲೀಸರು ಲಕ್ಷಾಂತರ ರೂ.ಮೌಲ್ಯದ ೩ ಕೆಜಿ ಸಿಡೊಫಿಡ್ರೈನ್ ಡ್ರಗ್ ಜಪ್ತಿ ಮಾಡಲಾಗಿದೆ. ಡ್ರಗ್ ಮರೆಮಾಚಲು, ಲೆಹೆಂಗಾದ ಫಾಲ್ಸ್ ಲೈನ್ ಭಾಗದಲ್ಲಿ ಸ್ಟಿಚ್ ಮಾಡಿ ಒಳಗಡೆ ಡ್ರಗ್ ಇಡಲಾಗಿತ್ತು. ಹಾಗೂ ನಕಲಿ ವಿಳಾಸದ ದಾಖಲಾತಿ ನೀಡಿ ಡ್ರಗ್ ಸಾಗಾಟ ಮಾಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ದೇವನಹಳ್ಳಿ ಟೋಲ್ ಬಳಿ ಮತ್ತೊಂದು ಕೇಸ್ ಪತ್ತೆ..
ಆಂಧ್ರ ಪಾಸಿಂಗ್ ನ ಶಿಫ್ಟ್ ಕಾರ್ ನಲ್ಲಿ ಡ್ರಗ್ ಸಾಗಾಟ ಮಾಡುತ್ತಿದ್ದ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮುಖ್ಯ ಪೆಡ್ಲರ್ ವಿಶಾಖಪಟ್ಟಣ ಮೂಲದವ ಎಂದು ತಿಳಿದು ಬಂದಿದೆ. ಉಳಿದ ಮೂವರು ಬಿಹಾರ್ ಮತ್ತು ಆಂಧ್ರ ಮೂಲದ ಆರೋಪಿಗಳಾಗಿದ್ದಾರೆ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ಸ್ವಿಫ್ಟ್ ಕಾರ್‌ನಲ್ಲಿ ಎಂಡಿಎಂ ಪಿಲ್ಸ್, ಮಿಥಾಫಿಟಮೈನ್ & ಮಿಥಾಕೋಲೋನ್ ಮಾದಕವನ್ನು ಇವರು ಸಾಗಿಸುತ್ತಿದ್ದರು ಎನ್ನಲಾಗಿದೆ.
ವಿಶಾಖಪಟ್ಟಣ ಮೂಲದ ಡ್ರಗ್ ಸಪ್ಲೈಯರ್ ಮನೆಯಲ್ಲಿಯೂ ಶೋಧ ಕಾರ್ಯಾಚರಣೆ ನಡೆದಿದೆ. ಈ ವೇಳೆ ಒಳ್ಳೆ ತಳಿಯ ಗಾಂಜಾ ಪತ್ತೆಯಾಗಿದೆ. ಈ ಕೇಸ್‌ನ ಮುಖ್ಯ ಪೆಡ್ಲರ್, ಬೆಂಗಳೂರು ಮೂಲದ ವ್ಯಕ್ತಿಯಿಂದ ವಿವಿಧ ಬಗೆಯ ಡ್ರಗ್ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಬಳಿಕ ಹೈದರಾಬಾದ್ ನಗರದ ಪಾರ್ಟೀಸ್, ಪಬ್ ಹಾಗೂ ಇನ್ನಿತರ ಇವೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ. ಸದ್ಯ ಎನ್‌ಸಿಬಿಯಿಂದ ತನಿಖೆ ಮುಂದುವರೆದಿದೆ.
PublicNext
23/10/2021 05:11 pm