ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಾಗಲಕೋಟೆ: ಒಂದು ಕ್ಷಣ ಮೈಮರೆತರೆ ಸಾಕು ಅನಾಹುತಗಳು ನಡೆದು ಹೋಗುತ್ತವೆ. ಸದ್ಯ ಬಾಗಲಕೋಟೆಯಲ್ಲಿ ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ.

ದೃಶ್ಯದಲ್ಲಿ ಗಮನಿಸುವಂತೆ ಇಲ್ಲೊಬ್ಬ ಬೈಕ್ ಸವಾರನ ಹಣವನ್ನು ಕಳ್ಳನೊಬ್ಬ ಬೈಕ್ ಚಲಿಸುತ್ತಿದ್ದಾಗಲೇ ಕದ್ದರೂ ಆತನಿಗೆ ಅರಿವೆಗೆ ಬಂದಿಲ್ಲ.

ಬಾಗಲಕೋಟೆ ಜಿಲ್ಲೆಯ ತೇರದಾಳ ಗ್ರಾಮದಲ್ಲಿ ಈ ಕಳ್ಳತನ ನಡೆದಿದೆ. ಬೈಕ್ ಸವಾರ ತೇರದಾಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿದ್ದನ್ನು ಕಂಡ ಕಳ್ಳ, ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಎನ್ನಲಾಗಿದೆ.

ಬ್ಯಾಂಕ್ನಿಂದ ಹಣ ಪಡೆದು ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇರಿಸಿಕೊಂಡು ಹೊರಟಿದ್ದ ಸವಾರ ತೇರದಾಳ ಮಾರುಕಟ್ಟೆ ಬಳಿ ನಿಧಾನವಾಗಿ ಚಲಿಸುತ್ತಿದ್ದಾಗ ಈ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ.

ಕಳ್ಳ ಬೈಕ್ ನ ಸೈಡ್ ಬ್ಯಾಗ್ನಿಂದ ಹಣ ಎಗರಿಸಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರ ಸಸಾಲಟ್ಟಿ ಗ್ರಾಮದವ ಎನ್ನಲಾಗಿದೆ. ಇನ್ನು ಈ ಕುರಿತು ತೇರದಾಳ ಠಾಣೆಯಲ್ಲಿ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ಹೀಗಾಗಿ ಬೈಕ್ ಸವಾರ ಯಾರು, ಕಳೆದುಕೊಂಡ ಹಣವೆಷ್ಟು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭಿಸಿಲ್ಲ. ಆದರೂ ಜನನಿಬಿಡ ಪ್ರದೇಶದಲ್ಲಿ ಕಳ್ಳ ಹಣ ಎಗರಿಸಿದ್ದು ಮಾತ್ರ ಸಿನಿಮಿಯವಾಗಿದೆ.

Edited By : Nagesh Gaonkar
PublicNext

PublicNext

22/10/2021 10:59 pm

Cinque Terre

94.04 K

Cinque Terre

2

ಸಂಬಂಧಿತ ಸುದ್ದಿ