ಗಾಜಿಯಾಬಾದ್ ಮೂಲದ ಉದ್ಯಮಿ ಈಗ ಅರೆಸ್ಟ್ ಆಗಿದ್ದಾನೆ. ಮುಂಬೈ-ದೆಹಲಿ ವಿಮಾನದಲ್ಲಿ ನಟಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ಪೊಲೀಸರು ಈ ವ್ಯಾಪಾರಿಯನ್ನ ಬಂಧಿಸಿದ್ದಾರೆ. ನಡೆದದ್ದು ಇಷ್ಟೆ. 40 ವರ್ಷದ ಆ ನಟಿ ಹೇಳೋವಂತೆ, ವಿಮಾನದ ಓವರ್ ಹೆಡ್ ಸ್ಟೋರೇಜ್ ಅಲ್ಲಿ ತನ್ನ ಬ್ಯಾಗ್ ಇತ್ತು. ಅದನ್ನ ತೆಗೆದುಕೊಳ್ಳುತ್ತಿರೋವಾಗ,ಆ ವ್ಯಕ್ತಿ ನನ್ನ ಸೊಂಟ ಹಿಡಿದು ತನ್ನ ಬಳಿಗೆ ಎಳೆದುಕೊಂಡ ಎಂದು ಹೇಳಿದ್ದಾರೆ. ತಕ್ಷಣವೇ ನಟಿ ವಿಮಾನ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದರಿಂದ ಪೊಲೀಸರು ಆ ಉದ್ಯಮಿಯನ್ನ ಬಂಧಿಸಿದ್ದಾರೆ.
PublicNext
20/10/2021 09:45 pm