ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ ಬ್ರೇಕಿಂಗ್: ವಾಮಾಚಾರ ಮಾಡಿ ಯುವತಿಯನ್ನ ಮದ್ವೆಯಾದ ಯುವಕನಿಗೆ ಬಿದ್ವು ಗೂಸಾ.!

ಕಲಬುರಗಿ: ವಾಮಾಚಾರ ಮಾಡಿ ಯುವತಿಯನ್ನು ಮದುವೆಯಾದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಕಲಬುರಗಿ ನಗರದ ಶಹಾಬಜಾರ್ ತಾಂಡಾ ನಿವಾಸಿ ಖಾಸಿಪತಿ ಹಲ್ಲೆಗೆ ಒಳಗಾದ ಯುವಕ. ಬಳ್ಳಾರಿ ಮೂಲದ ಯುವತಿಯೊಂದಿಗೆ ಖಾಸಿಪತಿ ಸ್ನೇಹ ಬೆಳೆಸಿದ್ದ. ಬಳಿಕ ಆಕೆಗೆ ವಾಮಾಚಾರ ಮಾಡಿಸಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಯುವತಿಯ ಕುಟುಂಬಸ್ಥರು ಖಾಸಿಪತಿಗೆ ಶಾಸ್ತಿ ಮಾಡಿದ್ದಾರೆ.

ನಾಲ್ವರು ಯುವಕರು ಖಾಸಿಪತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಥಳಿಸಿದ್ದಾರೆ. ಕಲಬುರಗಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Manjunath H D
PublicNext

PublicNext

20/10/2021 12:52 pm

Cinque Terre

82.03 K

Cinque Terre

7