ಮೈಸೂರು: ಇಲ್ಲಿಯ ಚನ್ನಪಟ್ಟಣದ ಶೋಭಾ ಹೆಸರಿನ ಯವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆದರೆ ಈಕೆ ಸತ್ತು 15 ದಿನದ ಬಳಿಕ ಈಕೇನೇ ಬರೆದ ಡೆತ್ ನೋಟ್ ಈಗ ಸಿಕ್ಕಿದೆ. ಹೌದು. ಡೆತ್ ನೋಟ್ ಸಿಕ್ಕಿದೆ ತಡ. ಹುಲ್ಲಹಳ್ಳಿ ಠಾಣೆ ಎ.ಎಸ್ ಐ ಸೇರಿ 8 ಜನರ ವಿರುದ್ಧ ಈಗ ಎಫ್.ಐ.ಆರ್ ದಾಖಲು.
ನಂಜನಗೂಡು ತಾಲೂಕಿನ ಚನ್ನಪಟ್ಟಣದ ಯುವತಿ ಶೋಭಾ ಸಾಯುವ ಮುಂಚೆ ಒಂದ್ ಡೆತ್ ನೋಟ್ ಬರೆದಿದ್ದಾಳೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಶೋಭಾ ಬರೆದ ಆ ಡೆತ್ ನೋಟ್ 15 ದಿನದ ಬಳಿಕ ಪೊಲೀಸರಿಗೆ ಸಿಕ್ಕಿದೆ. ಹಾಗೇನೆ ಶೋಭಾ ಡೆತ್ ನೋಟ್ ಅಲ್ಲಿ ಹೀಗೆ ಬರೆದಿದ್ದಾರೆ. ಅದರ ಸಾರಾಂಶ ಇಲ್ಲಿದೆ ಓದಿ
ಲೋಕೇಶ್ ಎಂಬಾತನನ್ನ ನಾನು ಪ್ರೀತಿಸುತ್ತಿದ್ದೆ. ಆದರೆ ಮದುವೆ ಆಗಲು ಆತ ತಕರಾರು ತೆಗೆದಿದ್ದ.ಸುರೇಶ್ ಎಂಬಾತನ ಬಳಿಯಿಂದ ಕೊಲೆ ಬೆದರಿಕೆಯನ್ನೂ ಹಾಕಿಸಿದ್ದ ಲೋಕೇಶ್. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ.ಹುಲ್ಲಹಳ್ಳಿ ಠಾಣೆ ಎ.ಎಸ್.ಐ ಶಿವರಾಜು ನನ್ನ ದೂರು ದಾಖಲಿಸದೇನೆ ವಾಪಾಸ್ ಕಳಿಸಿದ್ದರು. ನಮ್ಮಿಬ್ಬರ ಪ್ರೀತಿಗೆ ಸಾಕ್ಷಿ ಇದೆ.ಮೊಬೈಲ್ ಅಲ್ಲಿ ವರ್ಷದಿಂದಲೂ ಮಾತನಾಡಿದ ಕಾಲ್ ರೆಕಾರ್ಡ್ ಇದೆ. ಈ ನೋವಿನಿಂದ ನಾನು ಸತ್ತರೆ ನನ್ನ ಸಾವಿಗೆ ಇವರೆ ಕಾರಣ.ಇವರನ್ನ ಗಲ್ಲಿಗೇರಿಸಿ ಎಂದು ಶೋಭಾ ಡೆತ್ ನೋಟ್ ಅಲ್ಲಿ ಬರೆದಿದ್ದಾಳೆ.
ಈ ಡೆತ್ ನೋಟ್ ಪೊಲೀಸರ ಕೈ ಸೇರಿದ ಬಳಿಕ ಎ.ಎಸ್ ಐ ಸೇರಿ 8 ಜನರ ವಿರುದ್ಧ ಈಗ ಎಫ್.ಐ.ಆರ್ ದಾಖಲಾಗಿದೆ.
PublicNext
18/10/2021 07:21 pm