ಚಿತ್ರದುರ್ಗ: ಒಂದೇ ಮನೆಯಲ್ಲಿ ವಿಷ ಆಹಾರ ಸೇವಿಸಿ ನಾಲ್ವರ ಸಾವು ಪ್ರಕರಣದಲ್ಲಿ ಮನೆಯ ಮಗಳೇ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಜುಲೈ 22 ರಂದು ನಡೆದ ಈ ಪ್ರಕರಣ ಇಡೀ ಚಿತ್ರದುರ್ಗ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಬಗ್ಗೆ ಭರಮಸಾಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಯನ್ನು ಮುಂದುವರೆಸಿ ಊಟ ಮಾಡಿದ್ದ ಆಹಾರವನ್ನು ( ರಾಗಿಮುದ್ದೆ, ರಾಗಿಮುದ್ದೆ ಮಾಡಿದ್ದ ಅಲ್ಯುಮಿನಿಯಂ ಪಾತ್ರೆ,ವಾಂತಿ) ಹಾಗೂ ಆಹಾರ ತಯಾರು ಮಾಡಲು ಬಳಸಿದ್ದ ಎಲ್ಲಾ ಆಹಾರ ಪದಾರ್ಥಗಳನ್ನು ಮತ್ತು ಮೃತರ ಬಾಬ್ತು ವೈದ್ಯರು ಸಂಗ್ರಹಿಸಿ ಕೊಟ್ಟಿದ್ದ ವಿಸಿರಾ ಭಾಂಗಿಗಳನ್ನು ಆರ್.ಎಫ್.ಎಸ್.ಎಲ್. ದಾವಣಗೆರೆಗೆ ಕಳುಹಿಸಿದ್ದರು. ರಾಗಿ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿರುವ ಬಗ್ಗೆ ಎಫ್.ಎಸ್.ಎಲ್. ವರದಿ ಬಂದಿದ್ದು ಬಾಲಕಿಯೇ ಊಟದಲ್ಲಿ ವಿಷ ಬೆರೆಸಿರುವುದು ತಿಳಿದು ಬಂದಿದೆ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯನ್ನು ಅವರ ಕುಟುಂಬದ ತಂದೆ ತಾಯಿ ಹಾಗೂ ಇತರೆ ಸದಸ್ಯರುಗಳು ಪೋಷಕರು ಬಾಲಕಿ ಬಗ್ಗೆ ತಾತ್ಸಾರ ಮನೋಭಾವನೆಯನ್ನು ತಾಳಿದ್ದರು. ಅಲ್ಲದೆ ಶಾಲೆಯನ್ನು ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು. ಬೈಗುಳ ಹಾಗೂ ಇತರೆ ಸದಸ್ಯರುಗಳ ವಿನಾಕಾರಣ ಬೈಯುವುದು, ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದು, ರಮ್ಯಾ ಹಾಗೂ ರಾಹುಲ್ ಇವರುಗಳನ್ನು ಪೋಷಕರು ಪ್ರೀತಿಯಿಂದ ಕಾಣುತ್ತಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯನ್ನು ತಿರಸ್ಕಾರ ಮನೋಭಾವದಿಂದ ಕಾಣುತ್ತಿದ್ದರು. ಇದರಿಂದ ಬಾಲಕಿಯೂ ಇವರನ್ನು ವಿಷಹಾಕಿ ಹಾಯಿಸಿದರೆ ನನಗೆ ಯಾರು ಬೈಯುವುದಿಲ್ಲ, ಕೂಲಿ ಕೆಲಸಕ್ಕೆ ಕಳುಹಿಸಿವುದಿಲ್ಲ ಎಂದು ಯೋಚಿಸಿ ರಾತ್ರಿ ಊಟದ ರಾಗಿ ಮುದ್ದೆಯಲ್ಲಿ ವಿಷ ಹಾಕಿ ನಾಲ್ವರ ಸಾವಿಗೆ ಕಾರಣವಾಗಿದ್ದಾಗಿ ಒಪ್ಪಿಕೊಂಡಿರುತ್ತಾಳೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾಹಿತಿ ನೀಡಿದರು.
PublicNext
18/10/2021 09:02 am