ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿ- ವಾತ್ಸಲ್ಯದಲ್ಲಿ ತಾರತಮ್ಯ: ಅಣ್ಣ-ತಂಗಿ, ಅಪ್ಪ-ಅಮ್ಮ, ಅಜ್ಜಿಗೆ ವಿಷವಿಟ್ಟ ಮನೆ ಮಗಳು

ಚಿತ್ರದುರ್ಗ: ತಾಲ್ಲೂಕಿನ ಇಸಾಮುದ್ರ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ.

ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದ ನಾಲ್ವರು ಮೃತಪಟ್ಟ ಘಟನೆ ಜುಲೈ 12ರಂದು ನಡೆದಿತ್ತು. ಬಾಲಕಿಯ ತಂದೆ ತಿಪ್ಪಾನಾಯ್ಕ (45), ತಾಯಿ ಸುಧಾಬಾಯಿ (40), ಅಜ್ಜಿ ಗುಂಡಿಬಾಯಿ (80) ಹಾಗೂ ಸಹೋದರಿ ರಮ್ಯಾ (16) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಹುಲ್‌ (19) ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ.

ಘಟನೆ ನಡೆದು ಮೂರು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ. ಮಕ್ಕಳಿಗೆ ತೋರುವ ಪ್ರೀತಿ-ವಾತ್ಸಲ್ಯದಲ್ಲಿ ಆಗಿರುವ ತಾರತಮ್ಯಕ್ಕೆ ಪುತ್ರಿಯೇ ವಿಷವಿಟ್ಟು ಪೋಷಕರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೌದು. ಈ ಪ್ರಕರಣ ಸಂಬಂಧ 17 ವರ್ಷದ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ಬಾಲಕಿಯರ ಬಾಲಮಂದಿರಕ್ಕೆ ಹಸ್ತಾಂತರಿಸಿದ್ದಾರೆ. ಮುದ್ದೆಯಲ್ಲಿ ಬೆರೆತಿದ್ದ ಕೀಟನಾಶಕ ಸಾವಿಗೆ ಕಾರಣವಾಗಿದೆ ಎಂಬುದು ದೃಢಪಟ್ಟಿದೆ.

ಜುಲೈ 12ರಂದು ರಾತ್ರಿ ಬಾಲಕಿ ಮುದ್ದೆ ತಯಾರಿಸಿದ್ದಳು. ಇವಳ ಸಹೋದರಿ ಅನ್ನ–ಸಾರು ತಯಾರಿಸಿದ್ದಳು. ಮನೆಯ ಮುಂಭಾಗದ ಜಗುಲಿ ಸಮೀಪದ ಒಲೆಯಲ್ಲಿ ಊಟವನ್ನು ಸಿದ್ಧಪಡಿಸಲಾಗಿತ್ತು. ಮುದ್ದೆಗೆ ಕೀಟನಾಶಕವನ್ನು ಬೆರಸಿದ ಬಾಲಕಿ ಕುಟುಂಬದ ಎಲ್ಲರಿಗೂ ಬಡಿಸಿದ್ದಳು. ತಾನು ಮಾತ್ರ ಅನ್ನ–ಸಾರು ಊಟ ಮಾಡಿದ್ದಳು. ಆಹಾರ ಸೇವಿಸಿದ ಐವರಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವ ಮೊದಲೇ ನಾಲ್ವರು ಮೃತಪಟ್ಟಿದ್ದರು. ಬಾಲಕಿ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಶಾಕಿಂಗ್ ಸಂಗತಿ ಹೊರ ಬಿದ್ದಿದೆ.

Edited By : Vijay Kumar
PublicNext

PublicNext

17/10/2021 10:23 pm

Cinque Terre

73.89 K

Cinque Terre

0

ಸಂಬಂಧಿತ ಸುದ್ದಿ