ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ: ಪ್ರವಾಹದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 3 ತಲೆಮಾರುಗಳ ಎಲ್ಲ 6 ಜನ

ತಿರುವನಂತಪುರಂ: ಕೇರಳದ ಕೆಲವು ಭಾಗಗಳಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಕೆಲವೆಡೆ ಪ್ರವಾಹ ಉಂಟಾಗಿದೆ. ಪರಿಣಾಮ ಒಂದೇ ಕುಟುಂಬದ ಮೂರು ತಲೆಮಾರುಗಳ ಎಲ್ಲ ಆರು ಜನರು (ಅಜ್ಜಿ, ತಂದೆ, ತಾಯಿ ಮತ್ತು ಮೂವರು ಹೆಣ್ಣು ಮಕ್ಕಳು) ಪ್ರವಾಹದಲ್ಲಿ ಕೊಚ್ಚಿ ಹೋದ ದುರ್ಘಟನೆ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.

ಕ್ಲಾರಮ್ಮ ಜೋಸೆಫ್ (65), ಅವರ ಮಗ ಮಾರ್ಟಿನ್ (48), ಅವರ ಪತ್ನಿ ಸಿನಿ (37), ಮತ್ತು ಅವರ ಮೂವರು ಪುತ್ರಿಯರಾದ ಸೋನಾ (11), ಸ್ನೇಹಾ (13) ಮತ್ತು ಸಾಂದ್ರ (9) ಮನೆ ಮೃತ ದುರ್ದೈವಿಗಳು. ಈ ಕುಟುಂಬವು ಶನಿವಾರ ಭೂಕುಸಿತ ಸಂಭವಿಸಿದ ಕೊಟ್ಟಾಯಂನ ಕೊಟ್ಟಿಕಲ್ಲಿನ ಸ್ಥಳಗಳಲ್ಲಿ ಒಂದಾದ ಕಾವಲಿಯ ಚರ್ಚ್ ಬಳಿ ವಾಸಿಸುತ್ತಿತ್ತು. ಒಟ್ಟಲಂಗಲ್ ಮಾರ್ಟಿನ್ ಅವರ ಮನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಅದರೊಂದಿಗೆ ಕುಟುಂಬದ ಆರು ಮಂದಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮೂವರ ಮೃತ ದೇಹಗಳು ಪತ್ತೆಯಾಗಿವೆ.

Edited By : Vijay Kumar
PublicNext

PublicNext

17/10/2021 06:34 pm

Cinque Terre

97.82 K

Cinque Terre

6