ರತ್ನಗಿರಿ: ಮಹಾರಾಷ್ಟ್ರದಲ್ಲಿ 21 ನಾಯಿಗಳ ಮಾರಣಹೋಮ ನಡೆದಿದೆ. 21 ನಾಯಿಗಳಲ್ಲಿ ಪ್ರತಿ ನಾಯಿಗೂ ವಿಷ ಹಾಕಿ ಕೊಲ್ಲಲಾಗಿದೆ ಅಂತಲೇ ಶಂಕಿಸಲಾಗಿದೆ.
ಮಹಾರಾಷ್ಟ್ರದ ರತ್ನಗಿರಿ ಈಗ ನಾಯಿಗಳ ಸಾಮೂಹಿಕ ಮಾರಣಹೋಮಕ್ಕೂ ಕಾರಣ ಆಗಿದೆ. ಈ ರತ್ನಗಿರಿಯ ಆರೋಗ್ಯ ಮಂದಿರ ಮತ್ತು ಐಸಿಐಸಿಐ ರಸ್ತೆ ಸೇರಿದಂತೆ ಇಲ್ಲಿಯ ಹಲವು ಭಾಗದಿಂದಲೇ ಸತ್ತ ನಾಯಿಗಳನ್ನ ಸಂಗ್ರಹಿಸಿ ಒಂದೇ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿದೆ. ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಶಾಲೆಗೂ ಕಳಿಸಲಾಗಿದ್ದು, ವಿಷ ಹಾಕಿ ನಾಯಿಗಳನ್ನು ಕೊಲ್ಲಲಾಗಿದೆ ಅಂತಲೇ ಶಂಕಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
PublicNext
08/10/2021 04:20 pm