ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

85 ಲಕ್ಷ ವರದಕ್ಷಿಣೆ ಪಡೆದ ಗಂಡ-ಹೆಂಡತಿಯನ್ನ ಕೊಂದನೇ ?

ಪುಣೆ:ಕೇರಳ ಮೂಲದ 29 ವರ್ಷದ ಹೆಣ್ಮಗಳು ಈಗ ಸತ್ತು ಹೋಗಿದ್ದಾಳೆ. ಈಕೆಯ ದುರಂತ ಸಾವು ಇಡೀ ಕುಟುಂಬವನ್ನೇ ತಲ್ಲಣಗೊಳಿಸಿದೆ.ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಅನ್ನೋ ಪೋಷಕರಿಗೆ ಅಳಿಯನ ಮೇಲೆನೆ ಅನುಮಾನ ಇದೆ. ಅದಕ್ಕೇನೆ ಈಗ ಮಗಳ ಗಂಡ ಅಳಿಯ ಅರೆಸ್ಟ್.

ಕೇರಳ ಮೂಲದ ಪ್ರೀತಿಗೆ 29 ವರ್ಷ. ಮದುವೆ ಆಗಿ ಕೇವಲ 5 ವರ್ಷ ಆಗಿದೆ. ಪುಣೆ ಮೂಲದ ಅಖಿಲ್ ನನ್ನ ಮದುವೆ ಆಗಿದ್ದಳು. ಅಖಿಲ್ 85 ಲಕ್ಷ ದುಡ್ಡು ಹಾಗು 120 ಸವರನ್ ಚಿನ್ನ ಕೂಡ ವರದಕ್ಷಿಣೆಯಾಗಿ ಪಡೆದಿದ್ದ. ಆದರೂ ಈಗ ಪುಣೆಯ ಮನೆಯಲ್ಲಿಯೇ ಪ್ರೀತಿ ಸತ್ತು ಹೋಗಿದ್ದಾಳೆ. ಆದರೆ, ಪ್ರೀತಿಯ ಸಾವಿನ ವಿಷಯ ಪೋಷಕರಿಗೆ ಅಳಿಯನ ಮನೆಯವರು ತಿಳಿಸಿಯೇ ಇಲ್ಲ. ಹೊರಗಿನವ್ರು ತಿಳಿಸಿದ ಬಳಿಕವೇ ಪ್ರೀತಿಯ ಸಾವಿನ ಸುದ್ದಿ ತಂದೆ-ತಾಯಿಗೆ ತಿಳಿದಿದೆ.

ಸತ್ತು ಬಿದ್ದ ಪ್ರೀತಿಯ ದೇಹದ ಮೇಲೆ ಗಾಯಗಳಾಗಿದ್ದವು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳ ಹತ್ಯೆ ಆಗಿದೆ ಅಂತಲೇ ದೂರಿದ್ದಾರೆ ಪೋಷಕರು. ಪತಿ ಅಖಿಲ್ ಅರೆಸ್ಟ್ ಆಗಿದ್ದಾನೆ.ಅಖಿಲ್ ತಾಯಿ ವಿಚಾರಣೆ ನಡೆದಿದೆ. ಶನಿವಾರ ಕೇರಳದ ಕೊಲ್ಲಂನಲ್ಲಿ ಪ್ರೀತಿಯ ಅಂತ್ಯಕ್ರಿಯೆ ನೆರವೇರಲಿದೆ.

Edited By :
PublicNext

PublicNext

08/10/2021 01:03 pm

Cinque Terre

59.55 K

Cinque Terre

0

ಸಂಬಂಧಿತ ಸುದ್ದಿ