ಬೆಂಗಳೂರು: ಮಗಳದ್ದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಗಂಭೀರ ಆರೋಪ ಮಾಡಿದ ನರ್ಸ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತಪಟ್ಟ ನರ್ಸ್ ಮೊಬೈಲ್ ನಿಂದಾಗಿ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ. ಮೊಬೈಲ್ ನಲ್ಲಿ ಸಿಕ್ಕ ಹಸಿಬಿಸಿ ಫೋಟೋಗಳಿಂದ ಆಕೆಯ ಪಾಲಕರಲ್ಲಿ ಅನುಮಾನ ಮೂಡಿದ್ದು, ಮಗಳದ್ದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಆರೋಪ ಮಾಡಿದ್ದಾರೆ.
ಆರೋಪಿಯನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯ ಮಾಡಿದ್ದು, ದೇವನಹಳ್ಳಿಯ ಖಾಸಗಿ ಆಸ್ವತ್ರೆ ಮುಂದೆ ಮೃತ ಯುವತಿಯ ಪಾಲಕರು ಕಣ್ಣೀರಿಟ್ಟಿದ್ದಾರೆ. ಆಗಸ್ಟ್ 17 ರಂದು ಶ್ವೇತಾಂಜಲಿ (23 ) ಎಂಬಾಕೆ ಆತ್ಮಹತ್ಯೆ ಪ್ರಯತ್ನ ಮಾಡಿ, 27 ರಂದು ಮೃತಪಟ್ಟಿದ್ದಳು. ಈ ವೇಳೆ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ, ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮಣ್ಣು ಮಾಡಿಸಿದ್ದರು.
ಇದೀಗ ಯುವತಿಯ ಮೊಬೈಲ್ ನಲ್ಲಿ ಆಸ್ವತ್ರೆಯಲ್ಲಿ ಕೆಲಸ ಮಾಡ್ತಿದ್ದ ಗಿರೀಶ್ ಎಂಬುವನು ಜತೆ ಹಸಿಬಿಸಿಯಾಗಿ ತೆಗೆದುಕೊಂಡ ಪೊಟೋಗಳು ಪತ್ತೆಯಾಗಿವೆ. ಫೋಟೋ ಪತ್ತೆ ಹಿನ್ನೆಲೆ ಲೈಂಗಿಕವಾಗಿ ಬಳಸಿಕೊಂಡು ಮಗಳನ್ನ ಗಿರೀಶ್ ಕೊಲೆ ಮಾಡಿದ್ದಾನೆಂದು ಶ್ವೇತಾಂಜಲಿ ಪಾಲಕರು ಆರೋಪ ಮಾಡಿದ್ದಾರೆ. ಈ ಸಂಬಂಧ ತನಿಖೆ ಆರಂಭವಾಗಿದೆ.
PublicNext
07/10/2021 03:52 pm