ಬಾಗಲಕೋಟೆ: ಅಪ್ಪ- ಅಮ್ಮ ಬುದ್ಧಿ ಮಾತು ಹೇಳಿದ್ದಕ್ಕೆ ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.
ಬನಹಟ್ಟಿ ನಗರದ ಅಶೋಕ ಕಾಲೋನಿಯ ನಿವಾಸಿ ಸೌಂದರ್ಯ ಸಂಜು ಗೊಲಭಾಂವಿ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೌಂದರ್ಯ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕಾಲಹರಣ ಮಾಡಬೇಡ, ಊರಲ್ಲಿ ತಿರುಗಾಡಬೇಡ ಎಂದು ಪೋಷಕರು ಸೌಂದರ್ಯಗೆ ಕಿವಿಮಾತು ಹೇಳಿದ್ದರಂತೆ. ಇದೇ ವಿಚಾರವಾಗಿ ಸೌಂದರ್ಯ ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡಿ ಬಳೆಚೂರು (ಮಿಂಚಿನಪುಡಿ)ಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿದ್ದಳು. ಅಸ್ವಸ್ಥಗೊಂಡ ಆಕೆಯನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ಸಾವನ್ನಪ್ಪಿದ್ದಾಳೆ.
PublicNext
06/10/2021 08:13 am