ಬೆಂಗಳೂರು: ಅಕ್ರಮ ಸಂಬಂಧಕ್ಕೆ ಚಕಾರವೆತ್ತಿದ ಯುವಕನನ್ನು ಆತನ ತಾಯಿಯ ಎದುರೇ ಕೊಲೆ ಮಾಡಲಾಗಿದೆ. ಹಲಸೂರು ಠಾಣೆ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ ಈ ಘಟನೆ ನಡೆದಿದೆ.
17 ವರ್ಷ ವಯಸ್ಸಿನ ನಂದು ಎಂಬಾತ ಕೊಲೆಯಾದ ಯುವಕ. ಈತನ ತಾಯಿ ಗೀತಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಶಕ್ತಿವೇಲ್ ಎಂಬಾತನೇ ಕೊಲೆಗೈದ ಆರೋಪಿ. ಸುಮಾರು 6 ವರ್ಷಗಳ ಹಿಂದೆ ಗಂಡನನ್ನು ತೊರೆದ ಗೀತಾ ಮಗನೊಂದಿಗೆ ಬೇರೆ ಮನೆ ಮಾಡಿದ್ದಳು. ಈ ವೇಳೆ ಫೇಸ್ ಬುಕ್ ಮೂಲಕ ಶಕ್ತಿವೇಲ್ ಎಂಬ ಆಟೋ ಚಾಲಕನ ಪರಿಚಯವಾಗಿದೆ. ಪರಸ್ಪರ ಸಲುಗೆಯೂ ಬೆಳೆದಿದೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಶಕ್ತಿವೇಲ್, ಗೀತಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಗೀತಾಳ ಮಗ ನಂದುಗೆ ಅನುಮಾನ ಬಂದಿತ್ತು.
ನಿನ್ನೆ ಮಗನನ್ನು ಪುಸಲಾಯಿಸಿದ ಗೀತಾ ಹಾಗೂ ಶಕ್ತಿವೇಲ್ ಆತನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಶೆಯಲ್ಲಿ ಮಾತಿಗೆ ಮಾತು ಬೆಳೆದು ಪ್ರಿಯಕರ ಶಕ್ತಿವೇಲ್ ನಂದುಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶಕ್ತಿವೇಲ್ ಹಾಗೂ ಗೀತಾಳನ್ನು ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
PublicNext
05/10/2021 07:50 pm