ಬೆಳಗಾವಿ (ಚಿಕ್ಕೋಡಿ): ವಿದ್ಯುತ್ ಶಾಕ್ಗೆ ಒಳಗಾಗಿದ್ದ ಅಜ್ಜಿಯ ರಕ್ಷಣೆಗೆ ಹೋಗಿದ್ದ ಮೊಮ್ಮಗ ಕೂಡ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ.
ಅಜ್ಜಿ ಶಾಂತವ್ವಾ ಬಸ್ತವಾಡೆ ಹಾಗೂ ಮೊಮ್ಮಗ ಸಿದ್ಧಾರ್ಥ ಬಸ್ತವಾಡೆ (24) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಮತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಜ್ಜಿ ಶಾಂತವ್ವಾ ಅವರು ನಿನ್ನೆ (ಶನಿವಾರ) ರಾತ್ರಿ ತಮ್ಮ ಮನೆಯ ಹಿತ್ತಲಿನಲ್ಲಿ ಬಟ್ಟೆ ಒಣ ಹಾಕಲು ಹೋಗಿದ್ದರು. ಆದರೆ ಮಳೆ ಸುರಿದ ಹಿನ್ನೆಲೆಯಲ್ಲಿ ಬಟ್ಟೆ ಹಾಕುವ ತಂತಿಗೆ ವಿದ್ಯುತ್ ತಗುಲಿದೆ. ಇದನ್ನು ಗಮನಿಸದೆ ಅಜ್ಜಿ ಬಟ್ಟೆ ಹಾಕಲು ಹೋದಾಗ ಅಜ್ಜಿಗೆ ಮೊದಲು ಕರೆಂಟ್ ಶಾಕ್ ತಗುಲಿದ್ದು, ಅವರನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
PublicNext
03/10/2021 03:03 pm