ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಎ.ಸಿ.ಬಿ ದಾಳಿ: ಹಣ ಪೀಕುವಾಗ ಸಿಕ್ಕಿಬಿದ್ದ ಶಿವಾನಂದ್

ಗದಗನಲ್ಲಿ ಡಿಹೆಚ್ ಒ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು ಗುತ್ತಿಗೆ ಆಧಾರದಲ್ಲಿ ಕೆಲಸ ಮುಂದುವರೆಸಲು ಲಂಚದ ಬೇಡಿಕೆ ಇಟ್ಟಿದ್ದ, ಕಚೇರಿ ಆರೋಗ್ಯ ಇಲಾಖೆ ಅಧೀಕ್ಷಕ ಶಿವಾನಂದ ಶಿಂದೋಗಿ 19 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ಈತ ತಾಲೂಕು ಆಸ್ಪತ್ರೆಯ ಒ.ಒ.ಡಿ.ಮೇಲೆ ಡಿ.ಎಚ್ ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಎಸಿಬಿ, ಡಿವೈಎಸ್ ಪಿ ಎಮ್ ವಿ ಮಲ್ಲಾಪುರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು,ಎಸ್ ಐ ಆರ್ ಎಫ್ ದೇಸಾಯಿ, ವೀರಣ್ಣ ಹಳ್ಳಿ ಅವರಿಂದ ಕಡತ ಪರಿಶೀಲನೆ ಮಾಡಲಾಗಿದೆ.

ಎಸಿಬಿ ಸಿಬ್ಬಂದಿ ಎಮ್ ಎಮ್ ಐಯ್ಯನಗೌಡರ್, ಆರ್ ಹೆಚ್ ಹೆಬಸೂರ, ಶರೀಫ್ ಮುಲ್ಲಾ ಮಂಜು ಮುಳಗುಂದ ವೀರೇಶ್ ಬೀಸನಳ್ಳಿ ಸೇರಿದಂತೆ ಮುಂತಾದವರು ರೈಡ್ ನಲ್ಲಿ ಭಾಗಿಯಾಗಿದ್ದರು.

Edited By : Shivu K
PublicNext

PublicNext

30/09/2021 09:57 am

Cinque Terre

110.09 K

Cinque Terre

1

ಸಂಬಂಧಿತ ಸುದ್ದಿ